ADVERTISEMENT

ಸಿಇಟಿ ಫಲಿತಾಂಶ ಇಂದು ಸಂಜೆ 4 ಗಂಟೆಗೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:12 IST
Last Updated 19 ಸೆಪ್ಟೆಂಬರ್ 2021, 19:12 IST
   

ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ 28 ಮತ್ತು 29 ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಸೋಮವಾರ (ಸೆ. 20) ಸಂಜೆ 4 ಗಂಟೆಗೆ ಪ್ರಕಟವಾಗಲಿದೆ.

‘ದಾಖಲೆಯ ಅತ್ಯಲ್ಪ ಕಾಲಾವಧಿಯಲ್ಲಿ ಫಲಿತಾಂಶ ಪ್ರಕಟವಾಗುತ್ತಿದೆ. ಇದಕ್ಕಾಗಿ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಅವಿರತ ಶ್ರಮಿಸಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸಿಇಟಿ ಫಲಿತಾಂಶ ಸಂಜೆ 4 ಗಂಟೆಯ ಬಳಿಕ ಈ ಲಿಂಕ್ (https://cetonline.karnataka.gov.in/kea/) ಲಭ್ಯವಾಗಲಿದೆ.

ADVERTISEMENT

ದ್ವಿತೀಯ ಪಿಯು ಫಲಿತಾಂಶ
ದ್ವಿತೀಯ ಪಿಯುಸಿ ಖಾಸಗಿ (17,470)ಮತ್ತು ಫಲಿತಾಂಶ ತಿರಸ್ಕರಿಸಿದ್ದಹೊಸ ವಿದ್ಯಾರ್ಥಿಗಳು (592) ಹಾಗೂ ಪುನರಾವರ್ತಿತ (351) ಸೇರಿ ಒಟ್ಟು 18,413 ವಿದ್ಯಾರ್ಥಿಗಳ ಫಲಿತಾಂಶ ಬೆಳಿಗ್ಗೆ 10.30 ಕ್ಕೆ ಪ್ರಕಟವಾಗಲಿದೆ. ಆಗಸ್ಟ್‌– ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಪರೀಕ್ಷೆ ನಡೆದಿತ್ತು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಫಲಿತಾಂಶ ಪ್ರಕಟಿಸುವರು. ಈ ಲಿಂಕ್‌ನಲ್ಲಿ www.karresults.nic.in ಫಲಿತಾಂಶ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.