ADVERTISEMENT

Covid-19 Karnataka Update: 3,310 ಹೊಸ ಪ್ರಕರಣ; 6,524 ಮಂದಿ ಗುಣಮುಖ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2021, 16:14 IST
Last Updated 25 ಜೂನ್ 2021, 16:14 IST
   

ಬೆಂಗಳೂರು:24 ಗಂಟೆಗಳಲ್ಲಿ ರಾಜ್ಯದಲ್ಲಿಹೊಸದಾಗಿ 3,310 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಕರ್ನಾಟಕದಲ್ಲಿ ಇದುವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ 28,26,754ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇಂದು ಮೃತಪಟ್ಟ114 ಮಂದಿಯೂ ಸೇರಿದಂತೆ ಈವರೆಗೆ ಒಟ್ಟು 34,539 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಸೊಂಕಿನಿಂದ ಮೃತಪಟ್ಟವರ ಪ್ರಮಾಣ ಶೇ. 3.44ಕ್ಕೆ ತಲುಪಿದೆ.ಹೊಸದಾಗಿ 6,524 ಮಂದಿ ಚೇತರಿಸಿಕೊಂಡಿದ್ದು, ಸದ್ಯ 1,07,195 ಪ್ರಕರಣಗಳು ಸಕ್ರಿಯವಾಗಿವೆ.

ಬೆಂಗಳೂರಿನಲ್ಲಿ614 ಹೊಸ ಪ್ರಕರಣ
ರಾಜಧಾನಿ ಬೆಂಗಳೂರಿನಲ್ಲಿಎಂದಿನಂತೆ ಅತಿ ಹೆಚ್ಚುಹೊಸ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಇಂದು ಒಟ್ಟು 614 ಪ್ರಕರಣಗಳು ಪತ್ತೆಯಾಗಿದ್ದು, 17ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಇಲ್ಲಿ ವರದಿಯಾದ ಸಾವಿನ ಸಂಖ್ಯೆ15,554ಕ್ಕೆ ತಲುಪಿದೆ. ಉಳಿದಂತೆ ಹಾಸನ (399), ದಕ್ಷಿಣ ಕನ್ನಡ (377)ಹಾಗೂ ಮೈಸೂರಿನಲ್ಲಿ (367) ಮುನ್ನೂರಕ್ಕಿಂತ ಹೆಚ್ಚು,ಶಿವಮೊಗ್ಗ (212),ಕೊಡಗು (183), ಕೋಲಾರ (140),ಮಂಡ್ಯದಲ್ಲಿ (119) ನೂರಕ್ಕಿಂತ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.