ADVERTISEMENT

ಕನ್ನಡ ಸ್ಪಷ್ಟ ಬರವಣಿಗೆ ಕಮ್ಮಟ 26ರಂದು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 21:41 IST
Last Updated 20 ಸೆಪ್ಟೆಂಬರ್ 2021, 21:41 IST

ಬೆಂಗಳೂರು: ಕನ್ನಡದ ಲೇಖಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ಕನ್ನಡದಲ್ಲಿ ಸ್ಪಷ್ಟವಾಗಿ, ಸ್ವಚ್ಛವಾಗಿ ಬರೆಯುವ ಕ್ರಮವನ್ನು ಬೋಧಿಸುವ ಒಂದು ದಿನದ ಕಮ್ಮಟವನ್ನು ನಗರದ ಸದ್ಭಾವನಾ ಪ್ರತಿಷ್ಠಾನ ಹಮ್ಮಿಕೊಂಡಿದೆ.

ಮಾಗಡಿ ಮುಖ್ಯರಸ್ತೆಯ ಶ್ರೀಗಂಧದ ಕಾವಲ್‌ನಲ್ಲಿರುವ ಕೆಂಪೇಗೌಡ ನಿರ್ವಹಣಾ ಅಧ್ಯಯನ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇದೇ 26ರಂದು ಕಮ್ಮಟ ನಡೆಯಲಿದೆ. ಈ ಕಮ್ಮಟದಲ್ಲಿ ಉಪನ್ಯಾಸ, ಪ್ರಾತ್ಯಕ್ಷಿಕೆ, ಚರ್ಚೆ ಮತ್ತು ಅಭ್ಯಾಸಗಳು ಇರಲಿವೆ. ಭಾಷಾ ತಜ್ಞರಾದ ಕೆ. ರಾಜಕುಮಾರ್ ಅವರು ಕಮ್ಮಟದ ನಿರ್ದೇಶಕರು ಎಂದು ಸದ್ಭಾವನಾ ಪ್ರತಿಷ್ಠಾನದ ಎಂ. ಪ್ರಕಾಶಮೂರ್ತಿ ತಿಳಿಸಿದ್ದಾರೆ.

ಕನ್ನಡದ ಬಳಕೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಈ ಕಮ್ಮಟ ಆಯೋಜಿಸಲಾಗಿದೆ. ಆಸಕ್ತರು ₹ 50 ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಮೊದಲ 50 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ. ಭಾಗವಹಿಸುವವರಿಗೆ ಲೇಖನ ಸಾಮಗ್ರಿ, ಜೊತೆಗೆ ಭೋಜನ ವ್ಯವಸ್ಥೆ ಮಾಡಲಾಗುವುದು. ಪ್ರಮಾಣಪತ್ರಗಳನ್ನೂ ವಿತರಿಸಲಾಗುವುದು ಎಂದೂ ಹೇಳಿದ್ದಾರೆ. ಮಾಹಿತಿಗೆ 9448709651/ 8762802170.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.