ADVERTISEMENT

ಜೆಡಿಎಸ್‌ ತೊರೆಯುವ ಸುಳಿವು ನೀಡಿದ ಮಧು ಬಂಗಾರಪ್ಪ?

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 13:00 IST
Last Updated 2 ಮಾರ್ಚ್ 2021, 13:00 IST
ಮಾಜಿ ಶಾಸಕ ಮಧು ಬಂಗಾರಪ್ಪ
ಮಾಜಿ ಶಾಸಕ ಮಧು ಬಂಗಾರಪ್ಪ   

ಶಿವಮೊಗ್ಗ: ‘ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಒಳಗೆ ಸೂಕ್ತ ರಾಜಕೀಯ ನಿರ್ಧಾರ ತೆಗೆದುಕೊಳ್ಳುವೆ’ ಎನ್ನುವ ಮೂಲಕ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್‌ ತೊರೆಯುವ ಸುಳಿವು ನೀಡಿದರು.

ನಗರದ ಕಲ್ಲಹಳ್ಳಿಯ ಮನೆಯಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ, ಗುಲಾಬಿ ಗಿಡಗಳ ವಿತರಣಾ ಸಮಾರಂಭದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಇದು ಬದಲಾವಣೆಯ ಬರ್ತಡೇ. ಬೆಂಬಲಗರು, ಅಪ್ಪಾಜಿ ಅಭಿಮಾನಿಗಳು ಹಾಗೂ ನಂಬಿದ ಹಿತೈಷಿಗಳ ಹಿತದೃಷ್ಟಿಯಿಂದ ಖಚಿತ ನಿರ್ಧಾರ ತೆಗೆದುಕೊಳ್ಳಲೆಬೇಕಿದೆ. ದಶಕದ ಅವಧಿಯಲ್ಲಿ ಜೆಡಿಎಸ್‌ ಒಳ್ಳೆಯ ಅವಕಾಶಗಳನ್ನು ನೀಡಿದೆ. ಎಚ್‌.ಡಿ.ಕುಮಾರಸ್ವಾಮಿ ಅಣ್ಣನಂತೆ ಇದ್ದರು. ಕುಮಾರಣ್ಣ, ದೇವೇಗೌಡರನ್ನು ಎಂದೂ ಮರೆಯುವುದಿಲ್ಲ. ಆದರೆ, ಕೆಲವು ಬೆಳವಣಿಗೆಗಳು ಬೇಸರ ತರಿಸಿದವು. ನಾನು ಎಂದೂ ಅಧಿಕಾರ ಬಯಸಲಿಲ್ಲ. ಜತೆಗಿದ್ದವರಿಗೆ ಅವಕಾಶಗಳು ದೊರೆಯದೇ ಇದ್ದಾಗ ನೋವಾಗಿದ್ದು ಸತ್ಯ ಎಂದು ಮನದಾಳ ತೋಡಿಕೊಂಡರು.

ADVERTISEMENT

ಮಧು ಅವರ ಮಾತಿಗೆ ಪುಷ್ಟಿ ನೀಡುವಂತೆ ಜನ್ಮದಿನದ ಕಾರ್ಯಕ್ರಮ ಕಾಂಗ್ರೆಸ್‌ ಮುಖಂಡರಿಂದಲೇ ತುಂಬಿ ತುಳುಕುತ್ತಿತ್ತು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಸೇರಿದಂತೆ ಪಕ್ಷದ ನೂರಾರು ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.