ADVERTISEMENT

ಮೈಸೂರಿನಲ್ಲಿ ಮೂರು ‘ಡೆಲ್ಟಾ’ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 19:43 IST
Last Updated 24 ಜೂನ್ 2021, 19:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಮೈಸೂರಿನಲ್ಲಿ ಕೊರೊನಾ ವೈರಾಣುವಿನ ರೂಪಾಂತರಗೊಂಡಿರುವ ‘ಡೆಲ್ಟಾ ಪ್ಲಸ್‌’ ತಳಿಯ ಮತ್ತೆ ಮೂರು ಪ್ರಕರಣಗಳು ವರದಿಯಾಗಿವೆ.

‘ಕೋವಿಡ್ ಪರೀಕ್ಷೆಗೆ ಜಿಲ್ಲೆಯಲ್ಲಿ ಸಂಗ್ರಹಿಸಲಾದ ಗಂಟಲ ದ್ರವ ಮಾದರಿಗಳಲ್ಲಿ 20 ಮಾದರಿಗಳನ್ನು ಮೇ 13 ರಂದು ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿಕೊಡಲಾಗಿತ್ತು. ಇವುಗಳಲ್ಲಿ ನಾಲ್ಕು ಮಾದರಿಗಳಲ್ಲಿ ‘ಡೆಲ್ಟಾ’ ರೂಪಾಂತರಿ ತಳಿ ಸೋಂಕು ಇರುವುದು ದೃಢಪಟ್ಟಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್ ತಿಳಿಸಿದರು.

ಇದರಲ್ಲಿಮೂರು ಮಾದರಿಗಳು ‘ಡೆಲ್ಟಾ’‌ದ ಬಿ1.617.2 ತಳಿ ಆಗಿವೆ. ಒಂದು ಮಾದರಿ ‘ಡೆಲ್ಟಾ ಪ್ಲಸ್’ ಬಿ1.617.1 ತಳಿಯದ್ದು ಎಂಬುದುದೃಢಪಟ್ಟಿದೆ. ಎಲ್ಲ ಸೋಂಕಿತರು ಗುಣಮುಖರಾಗಿದ್ದಾರೆ. ರೂಪಾಂತರಗೊಂಡ ವೈರಾಣು ಹರಡದಂತೆ ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.