ADVERTISEMENT

ಭಾರತಕ್ಕೆ ಟೊಯೋಟೊ ಕಂಪನಿ ತಂದಿದ್ದ ವಿಕ್ರಂ ಕಿರ್ಲೋಸ್ಕರ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2022, 11:34 IST
Last Updated 30 ನವೆಂಬರ್ 2022, 11:34 IST
   

ನವದೆಹಲಿ/ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್‌ಮೊಟರ್‌ ಉಪಾಧ್ಯಕ್ಷ ವಿಕ್ರಂ ಎಸ್‌ ಕಿರ್ಲ್ಕೋಸ್ಕರ್‌(64) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.


'ವಿಕ್ರಂಕಿರ್ಲೋಸ್ಕರ್‌ ಅಕಾಲಿಕ ಮರಣ ತೀವ್ರ ದುಃಖವನ್ನುಂಟು ಮಾಡಿದೆ. ಈ ದುಃಖದ ಸಮಯದಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಎಲ್ಲರೂ ಪ್ರಾರ್ಥಿಸಬೇಕೆಂದು ಕೋರುತ್ತೇವೆ' ಎಂದು ಕಂಪನಿ ಪ್ರಕಟಣೆ ತಿಳಿಸಿದೆ.


ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ಇಂದುಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ಎಂದು ಪ್ರಕಟಣೆ ಹೇಳಿದೆ.

ADVERTISEMENT


ಟೊಯೊಟಾ ಕಿರ್ಲೋಸ್ಕರ್‌ ಮೊಟರ್‌ ವಾಹನ ಉತ್ಪಾದಕ ಮತ್ತು ಮಾರಾಟ ಸಂಸ್ಥೆಯಾಗಿದ್ದು ಜಪಾನ್‌ನ ವಾಹನ ಉದ್ಯಮ ದಿಗ್ಗಜ ಟೊಯೊಟಾ ಮೋಟರ್‌ ಮತ್ತು ಭಾರತದ ಕಿರ್ಲೋಸ್ಕರ್‌ ನಡುವಣ ಸಹಭಾಗಿತ್ವ ಸಂಸ್ಥೆಯಾಗಿದೆ.


‘ವಿಕ್ರಂ ಕಿರ್ಲೋಸ್ಕರ್‌ ಅಕಾಲಿಕ ಮರಣದ ಆಘಾತಕಾರಿ ಸುದ್ದಿಯಿಂದ ಜರ್ಜರಿತನಾಗಿರುವೆ. ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಅವರ ನಿಧನ ತುಂಬಲಾರದ ನಷ್ಟ. ಗೀತಾಂಜಲಿ ಮಾನಸಿ ಮತ್ತು ಕುಟುಂಬಕ್ಕೆ ಭಗವಂತ ನೋವು ಭರಿಸುವ ಶಕ್ತಿ ನೀಡಲಿ’ ಎಂದು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಹೇಳಿದ್ದಾರೆ.


ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ವಿಕ್ರಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟೊಯೊಟಾ ಬ್ರ್ಯಾಂಡ್‌ ಅನ್ನು ಭಾರತಕ್ಕೆ ಪರಿಚಯಿಸಿದ ಹೆಮ್ಮೆ ಇವರದ್ದು. ಇವರು ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.