ADVERTISEMENT

ರಾಮನಗರ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ನೃತ್ಯದ 'ಮದ್ದು' 

​ಪ್ರಜಾವಾಣಿ ವಾರ್ತೆ
Published 21 ಮೇ 2021, 10:03 IST
Last Updated 21 ಮೇ 2021, 10:03 IST
   

ಬೆಂಗಳೂರು:ರಾಮನಗರ ಜಿಲ್ಲೆಕನಕಪುರ ತಾಲ್ಲೂಕಿನಡಾ.‌ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆಯು ಕೋವಿಡ್ ಪೀಡಿತರಿಗೆ ವಿಭಿನ್ನ ರೀತಿಯ ಚಿಕಿತ್ಸೆ ನೀಡುತ್ತಿದೆ.

ಸೋಂಕಿತರು ಮಾನಸಿಕವಾಗಿ ಲವಲವಿಕೆಯಿಂದ ಇದ್ದಷ್ಟೂ ಬೇಗ ಗುಣಮುಖರಾಗುತ್ತಾರೆ ಎಂಬ ಉದ್ದೇಶದಿಂದ ಹಾಡು, ನೃತ್ಯದ ‌ಮೂಲಕ ಅವರನ್ನು ಖುಷಿಯಿಂದ ಇಡುವ ಕಾರ್ಯವನ್ನು ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಮಾಡುತ್ತಿದ್ದಾರೆ.

'ನಮ್ಮ ಆಸ್ಪತ್ರೆಯ ಡಾ. ಅಶೋಕ್ ಮತ್ತು ಡಾ. ಮದನ್ ಅವರ ಮಾರ್ಗದರ್ಶನದಲ್ಲಿ ಶುಶ್ರೂಷಕರು ಮತ್ತು ವೈದ್ಯರು ಈ ಕಾರ್ಯ ಮಾಡುತ್ತಿದ್ದಾರೆ. ರೋಗಿಗಳ ಮುಂದೆ ಕನ್ನಡ ಚಿತ್ರಗೀತೆಗಳಿಗೆ ನೃತ್ಯ ಮಾಡುತ್ತಿದ್ದಾರೆ. ಇದರಿಂದ ರೋಗಿಗಳಲ್ಲಿ ವಿಶ್ವಾಸ, ಆತ್ಮ ಸ್ಥೈರ್ಯ ತುಂಬಲು ಸಾಧ್ಯವಾಗುತ್ತಿದೆ' ಎಂದು ಆಸ್ಪತ್ರೆ ಸಿಬ್ಬಂದಿ ಪ್ರೀತಮ್ ಗೌಡ 'ಪ್ರಜಾವಾಣಿ' ಗೆ ತಿಳಿಸಿದರು.

ADVERTISEMENT

'67 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಸದ್ಯ 165 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಕೋಟಾದಡಿ ದಾಖಲಾಗುವ ರೋಗಿಗಳಿಗೆ ಉಚಿತವಾಗಿ, ಖಾಸಗಿ ಕೋಟಾದಡಿ ದಾಖಲಾಗುವ ರೋಗಿಗಳಿಂದ ಔಷಧ ಮತ್ತು ಆಮ್ಲಜನಕ ವ್ಯವಸ್ಥೆಯ ಶುಲ್ಕ ಮಾತ್ರ ಪಡೆಯಲಾಗುತ್ತಿದೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.