ADVERTISEMENT

ಕೊರೊನಾ ಉಡುಗೆ ತೊಟ್ಟು ರ್‍ಯಾಂಪ್ ವಾಕ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 13:13 IST
Last Updated 10 ಜುಲೈ 2020, 13:13 IST
ಕೊರೊನಾ ಗೌನ್
ಕೊರೊನಾ ಗೌನ್   

ವಿದ್ಯಾರ್ಥಿಯೊಬ್ಬಳುಗೌನ್‌ ತೊಟ್ಟ ಫೋಟೊಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಷ್ಟಕ್ಕೂ ವೈರಲ್‌ ಆಗುವಂತಹದ್ದು ಈ ಉಡುಗೆಯಲ್ಲಿ ಏನಿದೆ ? ಏನಿಲ್ಲ, ಉಡುಗೆ ತುಂಬಾ ’ಕೊರೊನಾ‘ ಇದೆ, ಅಷ್ಟೇ !

ಹೌದು. ಈ ಉಡುಗೆಯ ತುಂಬಾ ಇದೆ ‘ಕೊರೊನಾ ವೈರಸ್‘ ಇದೆ. ಅಂಥ ದಿರಿಸನ್ನು ಧರಿಸಿ ರ್‍ಯಾಂಪ್ ವಾಕ್‌ ಮಾಡಿದ್ದಾಳೆ ವಿದ್ಯಾರ್ಥಿನಿ.

‘ಅರೆ, ಕೊರೊನಾ ವೈರಸ್‌ ಇರುವ ಬಟ್ಟೆ ಧರಿಸಿದ್ದಳಾ‘ ಅಂತ ಗಾಬರಿಯಾಗಬೇಡಿ. ಏಕೆಂದರೆ, ಆಕೆ ಧರಿಸಿರುವುದು ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವಂತಹ ಚಿತ್ರಮಾಹಿತಿಗಳಿರುವ ಗೌನನ್ನು.

ADVERTISEMENT

ಅಮೆರಿಕದ ಪೇಟಾನ್‌ ಮ್ಯಾಂಕರ್‌ ಎಂಬ ಈ ವಿದ್ಯಾರ್ಥಿನಿ, ತಮ್ಮ ಕಾಲೇಜಿನ ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ಗೌನ್‌ ತಯಾರಿಸಿದ್ದಳು. ಕೊರೊನಾ ವೈರಸ್‌ ವಿರುದ್ಧ ಜಾಗೃತಿ ಮೂಡಿಸುವ ಥೀಮ್ ಇಟ್ಟುಕೊಂಡು ಗೌನ್ ವಿನ್ಯಾಸ ಮಾಡಿದ್ದಳು. ಆದರೆ, ಕೊರೊನಾ ಸೋಂಕು ಹೆಚ್ಚಾದ ಕಾರಣ ಕಾರ್ಯಕ್ರಮ ರದ್ಧಾಯಿತು. ಹೀಗಾಗಿ, ಆ ಗೌನ್ ತೊಟ್ಟುಕೊಂಡು ಮನೆಯಲ್ಲೇ ರ್‍ಯಾಂಪ್‌ ವಾಕ್‌ ಮಾಡಿದ್ದಳು ಪೇಟಾನ್‌. ಆಕೆ ಗೌನ್‌ ಧರಿಸಿದ್ದ ಫೋಟೊಗಳನ್ನು ಅವರ ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಫೋಟೊಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು ಜತೆಗೆ ಫೋಟೊ ವೈರಲ್ ಆಗಿತ್ತು.

ಅಂದ ಹಾಗೆ,ಈ ಗೌನ್ ಅನ್ನು ಡಕ್‌ ಟೇಪ್‌ನಿಂದ ತಯಾರಿಸಲಾಗಿದೆ. ಪೇಟಾನ್ ಈ ಗೌನ್ ತಯಾರಿಸಲು ಸುಮಾರು 400 ಗಂಟೆ ವ್ಯಯಿಸಿದ್ದಾಳೆ. ಗೌನ್‌ ಜತೆಗೆ, ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಹ್ಯಾಂಡ್‌ ಬ್ಯಾಗ್‌ ಅನ್ನೂ ತಯಾರಿಸಿದ್ದಾಳೆ.

‘ಮಗಳ ಕೌಶಲದ ಮೇಲೆ ನನಗೆ ಬಲವಾದ ನಂಬಿಕೆ ಇದೆ. ಆಕೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ಮೊದಲ ಸ್ಥಾನ ಪಡೆಯುತ್ತಿದ್ದಳು. ಅಂಥ ಥೀಮ್ ಅನ್ನು ಆಯ್ದುಕೊಂಡು ಉಡುಗೆ ತಯಾರಿಸಿದ್ದಳು. ಕಾರ್ಯಕ್ರಮ ರದ್ದಾದ್ದರಿಂದ ಪ್ರದರ್ಶನ ಸಾಧ್ಯವಾಗಲಿಲ್ಲ‘ ಎಂದು ಪೇಟಾನ್ ತಾಯಿ ಫೇಸ್‌ಬುಕ್‌ನಲ್ಲಿಬರೆದುಕೊಂಡಿದ್ದಾರೆ.

ಮಗಳ ಕ್ರಿಯಾಶೀಲತೆ ಹಾಗೂ ತಾಯಿಯ ಪ್ರೋತ್ಸಾಹದಿಂದಾಗಿ ಕೊರೊನಾ ಉಡುಗೆ ಟ್ರೆಂಡ್ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.