ADVERTISEMENT

ಮಣ್ಣಿಗೂ ಒಂದು ದಿನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:45 IST
Last Updated 28 ಜೂನ್ 2019, 19:45 IST
   

ಎಲ್ಲದಕ್ಕೂ ಒಂದು ದಿನ ಇದೆ. ಅದೇ ರೀತಿ ಮಣ್ಣಿಗೂ ಕೂಡ. ‘ಮನುಷ್ಯನ ಗುಣ ಮಣ್ಣಿನಿಂದ‘ ಎಂಬ ಮಾತಿದೆ. ಚಂದ್ರನ ಮೇಲೆ ಹೆಜ್ಜೆ ಇಟ್ಟರೂ ಮಣ್ಣಿನೊಂದಿಗೆ ಮಾನವನ ಅವಿನಾಭಾವ ಸಂಬಂಧ ಗಟ್ಟಿಗೊಳ್ಳುತ್ತಲೇ ಇದೆ. ಮಣ್ಣಿನ ಜತೆಗಿನ ಮಾನವೀಯ ಸಂಬಂಧವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡಲು2008ರಲ್ಲಿ ನೇಪಾಳ ಮತ್ತು ಆಸ್ಟ್ರೇಲಿಯಾದಲ್ಲಿ ಅಂತರರಾಷ್ಟ್ರೀಯ ಮಣ್ಣು ದಿನ (ಮಡ್‌ ಡೇ) ಆಚರಣೆ ಆರಂಭವಾಯಿತು.ಅಂತರರಾಷ್ಟ್ರೀಯ ಮಣ್ಣಿನ ದಿನಾಚರಣೆಯ ಪ್ರಯುಕ್ತ ಸಹಕಾರ ನಗರದ ಟ್ರಯೊ ಟಾಟ್ಸ್‌ ಶಾಲೆಯ ಪುಟಾಣಿಗಳುಲ್ಲಿ ಶುಕ್ರವಾರ ಮೈ ಮತ್ತು ಕೈಗಳಿಗೆ ಕೆಸರು ಮೆತ್ತಿಕೊಂಡ ಮಕ್ಕಳು ಸಂಭ್ರಮಿಸಿದರು. ಮಣ್ಣಿನಲ್ಲಿ ಆಟಿಕೆಗಳನ್ನು ತಯಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.