ADVERTISEMENT

ಫ್ಲ್ಯಾಟ್‌ಗಳಿಗೆ ತಗ್ಗಿಲ್ಲ ಬೇಡಿಕೆ: ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:53 IST
Last Updated 10 ಫೆಬ್ರುವರಿ 2021, 19:53 IST
ವಸತಿಸಮುಚ್ಚಯ
ವಸತಿಸಮುಚ್ಚಯ    

ಬೆಂಗಳೂರು: ರಿಯಲ್‌ ಎಸ್ಟೇಟ್‌ ವಲಯದಲ್ಲಿ ಕಳೆದ ಹತ್ತು ತಿಂಗಳಲ್ಲಿ ಬೇಡಿಕೆ ಕುಸಿದಿದೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಡಿಎಸ್‌ ಮ್ಯಾಕ್ಸ್‌ ಪ್ರಾಪರ್ಟೀಸ್‌ ಕಂಪನಿಯ ಅಧ್ಯಕ್ಷ ಡಾ.ಕೆ.ವಿ. ಸತೀಶ್ ಅದನ್ನು ಅಲ್ಲಗಳೆಯುತ್ತಾರೆ.

‘ನಮ್ಮ ಕಂಪನಿಯ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ತಗ್ಗಿಲ್ಲ. ಮನೆ ಎಂಬುದು ಜನರ ಮೂಲಭೂತ ಅಗತ್ಯಗಳಲ್ಲಿ ಒಂದು. ಮನೆ ಖರೀದಿಸುವ ತೀರ್ಮಾನವು ದೀರ್ಘಾವಧಿಯಿಂದ ಆಗಿರುತ್ತದೆ. ಬಹುದೊಡ್ಡ ದುರಂತ ಸಂಭವಿಸಿದರೆ ಮಾತ್ರ ಮನೆ ಖರೀದಿಯ ನಿರ್ಧಾರವನ್ನು ಜನ ಮುಂದಕ್ಕೆ ಹಾಕುತ್ತಾರೆ. ಮನೆಗಳ ಬಗ್ಗೆ ನಮ್ಮಲ್ಲಿ ಮೊದಲು ಎಷ್ಟು ಜನ ವಿಚಾರಿಸುತ್ತಿದ್ದರೋ ಈಗಲೂ ಅಷ್ಟೇ ಜನ ವಿಚಾರಿಸುತ್ತಿದ್ದಾರೆ’ ಎಂದು ಸತೀಶ್ ಹೇಳಿದ್ದಾರೆ.

ಡಿಎಸ್‌ ಮ್ಯಾಕ್ಸ್‌ ನಿರ್ಮಿಸುವ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲ್ಯಾಟ್‌ಗಳಿಗೆ ಕೋವಿಡ್‌–19ರ ಮೊದಲು ಎಷ್ಟು ಬೇಡಿಕೆ ಇತ್ತೋ ಈಗಲೂ ಅಷ್ಟೇ ಬೇಡಿಕೆ ಇದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.