ADVERTISEMENT

ಉತ್ತಮ ವಹಿವಾಟಿನತ್ತ ಎಐ ಕಣ್ಣು

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 12:52 IST
Last Updated 3 ಜುಲೈ 2018, 12:52 IST
   

ಟೆಕ್ ಸಲ್ಯೂಷನ್ ಕಂಪನಿ ‘ಎಂಜಿನಿಯರಿಂಗ್ ಎಐ’ ಮುಂದಿನ 5 ವರ್ಷಗಳಲ್ಲಿ ₹ 1000 ಕೋಟಿ ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ. ಕಂಪನಿಯು ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವ ಬಿಲ್ಡರ್‌ಗಳನ್ನು ಗಮನದಲ್ಲಿಟ್ಟು ಹೊಸ ಹೊಸ ಆ್ಯಪ್ ಮತ್ತು ಟೆಕ್ನಾಲಜಿ ಸೇವೆಗಳನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿ ಸೇರಿದಂತೆ ಇತರೆ ವೇದಿಕೆಗಳನ್ನು ಬಳಕೆ ಮಾಡಿಕೊಳ್ಳಲು ಎಐ ನಿರ್ಧರಿಸಿದೆ.

ಗೃಹ ನಿರ್ಮಾಣದ ಎಂಜಿಯರ್‌ಗಳಿಗೆ ಬೇಕಾಗಿರುವ ಪೂರಕ ಮಾಹಿತಿಯನ್ನು ನೀಡುವುದು ನಮ್ಮ ಉದ್ದೇಶ ಎಂದು ಎಐ ಕಂಪೆನಿಯ ಮುಖ್ಯಸ್ಥ ಸಚಿನ್ ದೇವ್ ತಿಳಿಸಿದ್ದಾರೆ. ಪ್ಲ್ಯಾನಿಂಗ್‌, ಸರಕು, ಸಾಧನ ಸಲಕರಣೆಗಳ ಮಾಹಿತಿಯು ಲಭ್ಯವಾಗಲಿದೆ. ಈಗಾಗಲೇ ಎಐ ಜೊತೆ 20 ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು ಸಂಪರ್ಕದಲ್ಲಿದ್ದು ನಮ್ಮ ತಂತ್ರಜ್ಞಾನ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದಾರೆ. 10 ಕ್ಕೂ ಹೆಚ್ಚು ವೈಶಿಷ್ಟ್ಯಗಳಿರುವ ಆ್ಯಪ್ ವಿನ್ಯಾಸ ಮಾಡಲು ₹3 ಲಕ್ಷ ವೆಚ್ಚವಾಗಲಿದೆ ಎಂದು ಸಚಿನ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT