ADVERTISEMENT

ನೀರಿನ ಸಂರಕ್ಷಣೆ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:56 IST
Last Updated 21 ಏಪ್ರಿಲ್ 2017, 6:56 IST
ಜಮಾಅತೆ ಇಸ್ಲಾಮೀ ಹಿಂದ್‌ ಮಕ್ಕಳ ವಿಭಾಗ ‘ಗುಲ್ಶನ್‌’ ವತಿಯಿಂದ ನಗರದಲ್ಲಿ ಗುರುವಾರ ‘ನೀರು ಉಳಿಸಿ, ಭವಿಷ್ಯ ಸಂರಕ್ಷಿಸಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಯಿತು.			                     ಪ್ರಜಾವಾಣಿ ಚಿತ್ರ
ಜಮಾಅತೆ ಇಸ್ಲಾಮೀ ಹಿಂದ್‌ ಮಕ್ಕಳ ವಿಭಾಗ ‘ಗುಲ್ಶನ್‌’ ವತಿಯಿಂದ ನಗರದಲ್ಲಿ ಗುರುವಾರ ‘ನೀರು ಉಳಿಸಿ, ಭವಿಷ್ಯ ಸಂರಕ್ಷಿಸಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಯಿತು. ಪ್ರಜಾವಾಣಿ ಚಿತ್ರ   

ಉಡುಪಿ: ನೀರಿನ ಉಳಿತಾಯ, ಪ್ರಾಮುಖ್ಯತೆ, ದುಂದುವ್ಯಯ ಹಾಗೂ ಮಳೆನೀರು ಕೊಯ್ಲಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಜಮಾಅತೆ ಇಸ್ಲಾಮೀ ಹಿಂದ್‌ ಮಕ್ಕಳ ವಿಭಾಗ ‘ಗುಲ್ಶನ್‌’ ವತಿಯಿಂದ ನಗರದಲ್ಲಿ ಗುರುವಾರ ನೀರು ಉಳಿಸಿ, ಭವಿಷ್ಯ ಸಂರಕ್ಷಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಯಿತು.ಗುಲ್ಶನ್‌ ಸಂಘಟನೆ ಸುಮಾರು 130ಕ್ಕೂ ಹೆಚ್ಚಿನ ಮಕ್ಕಳು ಜಾಮಿಯಾ ಮಸೀದಿಯಿಂದ ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣದವರೆಗೆ ಮೆರವಣಿಗೆ ಮೂಲಕ ಬಂದು ಕ್ಲಾಕ್‌ ಟವರ್‌ ಬಳಿ ಮಾನವ ಸರಪಳಿ ನಿರ್ಮಿಸಿ ನೀರಿನ ಸಂರಕ್ಷಣೆ ಅಗತ್ಯ  ಕುರಿತು ಮಾಹಿತಿ ನೀಡಿದರು.

‘ನದಿ, ಸರೋವರ, ಬಾವಿ ಮಲಿನಗೊಳಿಸದಿರಿ’, ‘ನೀರು ಅಮೂಲ್ಯ ನೀರಿಲ್ಲದೆ ಬದುಕಿಲ್ಲ’, ಜಲ ಉಳಿಸಿ ಜೀವ ಉಳಿಸಿ ಇತ್ಯಾದಿ ಘೋಷ ವಾಕ್ಯಗಳ ಫಲಕ ಪ್ರದರ್ಶಿಸಿ ಮಕ್ಕಳು ಜಲ ಸಂರಕ್ಷಣೆ ಅರಿವು ಮೂಡಿಸಿದರು. ಏಪ್ರಿಲ್‌ 17ರಂದು ಆರಂಭಗೊಂಡಿರುವ ಈ ಅಭಿಯಾನವು ಏ. 22ರ ವರೆಗೆ ನಗರದ ಎಲ್ಲೆಡೆ ನಡೆಯಲಿದೆ.

ಸಂಚಾಲಕಿ ನವೀದಾ ಹುಸೇನ್‌ ಮಾತನಾಡಿ, ‘ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಗುಲ್ಶನ್‌ ಸಂಘಟನೆ ಮಕ್ಕಳು ಈ ರೀತಿ ಅಭಿಯಾನ ಆಯೋಜಿಸುತ್ತಾ ಬಂದಿ ದ್ದಾರೆ. ನೀರಿಗಾಗಿ ಎಲ್ಲೆಡೆ ಹಾಹಾಕಾರ ಆರಂಭವಾಗಿದ್ದು, ಅದ ಕ್ಕಾಗಿ ನೀರು ಉಳಿಸಿ ಎನ್ನುವ ಅಭಿಯಾನ ಆರಂಭಿಸ ಲಾಗಿದೆ. ನೀರು ಸಂರಕ್ಷಣೆ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಮಕ್ಕಳು ನಗರ ವ್ಯಾಪ್ತಿ ಮನೆ ಮನೆಗಳಿಗೆ ಭೇಟಿ ನೀಡಿ, ನೀರು ಸಂರ ಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. 200 ಮಕ್ಕಳು ಪಾಲ್ಗೊಂಡಿದ್ದು, 8ರಿಂದ15 ವರ್ಷದೊ ಳಗಿನ 130 ಮಕ್ಕಳು ಈ ಮಾನವ ಸರಪಳಿ ಅಭಿ ಯಾನದಲ್ಲಿ ಭಾಗವಹಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.