ADVERTISEMENT

‘ಜಲಸಂರಕ್ಷಣೆಯ ಜಾಗೃತಿ ಮೂಡಲಿ’

ತೋಕೂರು ಬಳಿ ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 3 ಮೇ 2017, 5:47 IST
Last Updated 3 ಮೇ 2017, 5:47 IST
ಮೂಲ್ಕಿ ಬಳಿಯ ತೋಕೂರು ಬಳಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಎರಡನೇ ಕಿಂಡಿ ಅಣೆಕಟ್ಟೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳುರು ಶಿಲಾನ್ಯಾಸ ನೆರವೇರಿಸಿದರು.
ಮೂಲ್ಕಿ ಬಳಿಯ ತೋಕೂರು ಬಳಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಎರಡನೇ ಕಿಂಡಿ ಅಣೆಕಟ್ಟೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳುರು ಶಿಲಾನ್ಯಾಸ ನೆರವೇರಿಸಿದರು.   

ಮೂಲ್ಕಿ: ಜಲ ಸಂರಕ್ಷಣೆಯ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿಯು ಕೈಗೊಳ್ಳಬೇಕು. ಗ್ರಾಮದ ಅಂತರ್ಜಲ ವೃದ್ಧಿಸಲು ಕಿಂಡಿ ಅಣೆಕಟ್ಟುಗಳಿಗೆ ಜೀವ ತುಂಬುವ ಕೆಲಸ ಆಗಬೇಕು. ಭವಿಷ್ಯತ್ತಿ ನಲ್ಲಿ ನೀರಿನ ಕೊರತೆಯನ್ನು ನೀಗಿಸಬ ಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಹೇಳಿದರು.

ತೋಕೂರು ಯುವಕ ಸಂಘದ ಸುವರ್ಣ ಮಹೋತ್ಸವದ ಸಾಮಾಜಿಕ ಯೋಜನೆಯಲ್ಲಿ ಪಡುಪಣಂಬೂರು ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ತೋಕೂರು ಬಳಿ ನಿರ್ಮಾಣ ಆಗಲಿರುವ ₹5ಲಕ್ಷ ವೆಚ್ಚದ ಎರಡನೇ ಕಿಂಡಿ ಅಣೆಕಟ್ಟೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಪಡುಪಣಂಬೂರು ಗ್ರಾಮ ಪಂಚಾ ಯಿತಿಯ ಅಧ್ಯಕ್ಷ ಮೋಹನ್‌ದಾಸ್ ಅಧ್ಯ ಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾ ಯಿತಿ ಸದಸ್ಯ ದಿವಾಕರ ಕರ್ಕೇರ, ಪಡು ಪಣಂಬೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಹೇಮನಾಥ ಅಮಿನ್, ದಿನೇಶ್‌ ಕುಲಾಲ್, ಲೀಲಾ ಬಂಜನ್, ಎಂ.ವಿ.ವಾಹಿದ್, ಶ್ಯಾಮಲಾ, ಮಹಿಳಾ ಮಂಡಲದ ಅಧ್ಯಕ್ಷೆ ವಿನೋದಾ ಭಟ್,

ಸಮಿತಿಯ ಗೌರವಾಧ್ಯಕ್ಷ ಟಿ.ಪುರುಷೋ ತ್ತಮರಾವ್, ಸ್ಥಾಪಕ ಸದಸ್ಯ ಎಲ್.ಕೆ. ಸಾಲ್ಯಾನ್, ವಿಶ್ವ ಬ್ಯಾಂಕ್ ನೀರು ಸರಬ ರಾಜು ಸಮಿತಿಯ ಅಧ್ಯಕ್ಷ ವಿನೋದ್‌ ಕುಮಾರ್, ಯುವಕ ಸಂಘದ ಮಾಜಿ ಅಧ್ಯಕ್ಷರಾದ ಟಿ.ಜಿ.ಭಂಡಾರಿ,

ರಮೇಶ್ ದೇವಾಡಿಗ, ಪಿ.ಸಿ.ಕೋಟ್ಯಾನ್, ರಾಮ ಚಂದ್ರ ಶೆಟ್ಟಿ, ಟಿ.ದಾಮೋದರ ಶೆಟ್ಟಿ, ಗ್ರಾಮಸ್ಥರಾದ ಗೋಪಾಲ ಮೂಲು, ಶಿವ ದೇವಾಡಿಗ, ತೋಕೂರು ದೇವಳದ ಅರ್ಚಕ ಮಧುಸೂದನ್ ಭಟ್ ಇದ್ದರು. ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿದರು, ಕಾರ್ಯದರ್ಶಿ ಆರ್.ಎನ್.ಶೆಟ್ಟಿಗಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT