ADVERTISEMENT

ಮದುಮಗಳ ನೃತ್ಯಕ್ಕೆ ಮನಸೋತ ಲಕ್ಷಾಂತರ ನೋಡುಗರು!

​ಪ್ರಜಾವಾಣಿ ವಾರ್ತೆ
Published 12 ಮೇ 2017, 6:51 IST
Last Updated 12 ಮೇ 2017, 6:51 IST
ಮದುಮಗಳ ನೃತ್ಯಕ್ಕೆ ಮನಸೋತ ಲಕ್ಷಾಂತರ ನೋಡುಗರು!
ಮದುಮಗಳ ನೃತ್ಯಕ್ಕೆ ಮನಸೋತ ಲಕ್ಷಾಂತರ ನೋಡುಗರು!   

ನ್ಯೂಯಾರ್ಕ್‌: ಮದುವೆಯಲ್ಲಿ ಮದುಮಗಳು ಸೆರಗಿನ ಮರೆಯಲ್ಲಿ ನಾಚಿಕೊಂಡು ಕೂರುವ ಕಾಲ ಇದಲ್ಲ. ಮದುವೆ ಸಮಾರಂಭದಲ್ಲಿ ಮದುಮಕ್ಕಳು ಕುಣಿದು ಸಂಭ್ರಮಿಸುವುದು ಕೂಡ ಹೊಸತೇನಲ್ಲ. ಆದರೆ, ನ್ಯೂಯಾರ್ಕ್‌ನಲ್ಲಿರುವ ಭಾರತ ಮೂಲದ ಪಾಯಲ್‌ ಕಡಕಿಯಾ ಪುಜ್ಜಿ ತಮ್ಮ ಮದುವೆಯಲ್ಲಿ ನರ್ತಿಸಿರುವುದು ಈಗ ದೊಡ್ಡ ಸುದ್ದಿಯಾಗಿದೆ!

ಸುದ್ದಿಯಾಗಿರುವುದು ಪಾಯಲ್‌ ನರ್ತಿಸಿದ ಕಾರಣಕ್ಕಲ್ಲ. ಆ ನರ್ತನದ ವಿಡಿಯೊ ಅನ್ನು ಅತಿ ಹೆಚ್ಚು ಮಂದಿ ನೋಡಿರುವ ಕಾರಣಕ್ಕೆ. ಪಾಯಲ್‌ ತಮ್ಮ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್‌ನ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿರುವ ವಿಡಿಯೊ Wedding Dance & Songs ಫೇಸ್‌ಬುಕ್ ಪೇಜ್‌ನಲ್ಲಿ ಮೇ 7ರಂದು ಪೋಸ್ಟ್‌ ಆಗಿತ್ತು.

ಪಾಯಲ್‌ ನೃತ್ಯದ 3 ನಿಮಿಷ 46 ಸೆಕೆಂಡ್‌ನ ವಿಡಿಯೊ ಅನ್ನು ಈವರೆಗೆ 14 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ‘ಮೈ ನೆ ಪ್ಯಾರ್‌ ಕಿಯಾ’ ಚಿತ್ರದ ‘ದಿಲ್‌ ದೀವಾನಾ’ ಮತ್ತು ‘ರಬ್‌ ನೆ ಬನಾ ದಿ ಜೋಡಿ’ ಚಿತ್ರದ ‘ತುಜ್‌ ಮೇ ರಬ್‌ ದಿಖ್ತಾ ಹೈ’ ಹಾಡುಗಳಿಗೆ ಪಾಯಲ್‌ ಸಹ ನರ್ತಕಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ.

ADVERTISEMENT

ಅಮೆರಿಕದಲ್ಲಿ ‘ಕ್ಲಾಸ್‌ಪಾಸ್‌’ ಎಂಬ ಫಿಟ್‌ನೆಸ್‌ ಸಂಸ್ಥೆಯನ್ನು ಕಟ್ಟಿರುವ ಪಾಯಲ್‌ ಅಮೆರಿಕದಲ್ಲೇ ನೆಲೆಸಿರುವ ಭಾರತೀಯ ಸಂಜಾತ ನಿಕ್ಕ್‌ ಪುಜ್ಜಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.