ADVERTISEMENT

ರಾಜಕೀಯ ಬೇಡ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2017, 19:30 IST
Last Updated 10 ಆಗಸ್ಟ್ 2017, 19:30 IST

ಪ್ರತಿಯೊಂದು ವಿಷಯಕ್ಕೂ ರಾಜಕೀಯ ಬಣ್ಣ ಬಳಿಯುವುದು ಈಗ ಸಾಮಾನ್ಯವಾಗಿದೆ. ಭಾರತದ ರಾಜಕಾರಣ ನೈತಿಕ ಮೌಲ್ಯಗಳಿಂದ ವಿಮುಖವಾಗುತ್ತಿದೆ ಎಂದೆನಿಸುತ್ತದೆ. ‘ಕ್ವಿಟ್ ಇಂಡಿಯಾ’ ಚಳವಳಿಯ 75ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ‘ನವಭಾರತ ನಿರ್ಮಾಣ’ದ ಕರೆ ನೀಡಿದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪರೋಕ್ಷವಾಗಿ ಆರ್‍ಎಸ್‍ಎಸ್ ಮತ್ತು ಇತರ ಸಂಘಟನೆಗಳ ಬಗ್ಗೆ ಕಿಡಿಕಾರಿದ್ದು ಇದಕ್ಕೆ ಇನ್ನೊಂದು ನಿದರ್ಶನ. ನಮ್ಮ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು,  ಕಾಂಗ್ರೆಸ್‍ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ.

ಒಬ್ಬ ವ್ಯಕ್ತಿ, ಒಂದು ಸಂಘಟನೆ ಅಥವಾ ಪಕ್ಷದಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಅದು ಭಾರತೀಯರೆಲ್ಲರ ಒಗ್ಗಟ್ಟಿನ ಹೋರಾಟವಾಗಿತ್ತು. ಸ್ವಾತಂತ್ರ್ಯಕ್ಕಾಗಿ ಎಷ್ಟೋ ಜನ ಪ್ರಾಣವನ್ನೇ ಅರ್ಪಿಸಿದ್ದಾರೆ. ಕ್ರಾಂತಿಕಾರಿ ಹೋರಾಟಗಾರರು ಇಂದಿನ ಯುವಪೀಳಿಗೆಗೆ ಸ್ಫೂರ್ತಿಯ ಚಿಲುಮೆಗಳಾಗಿದ್ದಾರೆ. ಹೀಗಿರುವಾಗ ಒಂದು ಪಕ್ಷದ ಹೋರಾಟದಿಂದ ನಮಗೆ ಸ್ವಾತಂತ್ರ್ಯ ದೊರೆಯಿತು ಎಂದು ಪ್ರಚಾರ ಮಾಡುವುದು ಸರಿಯಲ್ಲ. ಈ ವಿಚಾರದಲ್ಲೂ ರಾಜಕಾರಣ ಮಾಡುವುದು ಶೋಭೆ ತರುವುದಿಲ್ಲ ಎಂಬುದನ್ನು ಕಾಂಗ್ರೆಸ್‌ನವರು ಅರಿಯಬೇಕು. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರನ್ನು ಗೌರವಿಸಲಾಗದಿದ್ದರೆ ನಮಗೆ ದೊರೆತ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ.
–ಇಂದ್ರಜಿತ ಎಸ್. ನಾಲತವಾಡ, ಬೆನಕಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT