ADVERTISEMENT

ಗ್ರಹಿಕೆ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

‘ಹಿಂದೂ ಎಂಬ ಧರ್ಮವೇ ಇಲ್ಲ’ (ವಾ.ವಾ., ಸೆ.27) ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಆರ್.ಕೆ. ದಿವಾಕರ ಅವರ  ಪತ್ರಕ್ಕೆ ಈ ಪ್ರತಿಕ್ರಿಯೆ.

ತಮ್ಮ ಅಪಖ್ಯಾನಗಳಿಗೆ ಯಾವುದು ನಿಲುಕುವುದಿಲ್ಲವೋ, ತಮ್ಮ ಸೀಮಿತ ದೃಷ್ಟಿಗೆ ಯಾವುದು ಗೋಚರಿಸುವುದಿಲ್ಲವೋ ಅಂತಹುದು ಅಸ್ತಿತ್ವದಲ್ಲೇ ಇಲ್ಲ ಎಂದು ಢಾಣಾಢಂಗುರ ಹೊಡೆಯುವುದು ಮೂರ್ಖತನ. ಋಷಿ, ಮುನಿಗಳು, ದೃಷ್ಟಾರರ ಚಿಂತನೆಗಳ ತಳಹದಿ ಹೊಂದಿ, ಪುರಾಣ, ಪುಣ್ಯಗ್ರಂಥಗಳಿಂದ ಪುಷ್ಟಿಗೊಂಡು, ಸಾವಿರಾರು ದೇವಾಲಯಗಳು, ಹತ್ತಾರು ಹಬ್ಬಹರಿದಿನಗಳು, ಪಂಥಗಳು, ಹರಿದಾಸರು, ಕವಿಗಳು, ಜೋಗಿಗಳು, ಸಾಧುಸಂತರು, ಭಕ್ತಿಗೀತೆಗಳು, ದೇವತಾರಾಧನೆಗಳು, ಬದುಕಿನ ವಿವಿಧ ಹಂತಗಳ ಸಂಸ್ಕಾರಗಳು ಮುಂತಾದ ಇಟ್ಟಿಗೆಗಳಿಂದ ನಿರ್ಮಾಣಗೊಂಡಿರುವ ದೊಡ್ಡ ಇಮಾರತು ಹಿಂದೂ ಧರ್ಮ. ಅದು ಯಾವ ವ್ಯಾಖ್ಯಾನದ ವ್ಯಾಪ್ತಿಗೂ ಬರಬೇಕಿಲ್ಲ.

ಹಿಂದೂ ಧರ್ಮ ಎಂದರೆ ದಿವಾಕರ ಅವರು ಭ್ರಮಿಸಿರುವಂತೆ ಬರೀ ವೈದಿಕತೆಯಲ್ಲ. ಹಿಂದೂ ದೇವರುಗಳಾದ ರಾಮ, ಕೃಷ್ಣರು ವೈದಿಕರಲ್ಲ. ‘ರಾಮಾಯಣ’ ರಚಿಸಿದ ವಾಲ್ಮೀಕಿ, ‘ರಾಮಾಯಣ ದರ್ಶನಂ’ ಬರೆದ ಕುವೆಂಪು ವೈದಿಕರಲ್ಲ. ಹಿಂದೂಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳುವವರಲ್ಲಿ ವೈದಿಕರ ಸಂಖ್ಯೆ ಶೇಕಡಾ ಐದರಷ್ಟೂ ಇಲ್ಲ. ಇದೆಲ್ಲ ಬಹಳ ಸ್ಪಷ್ಟವಾಗಿದೆ.

ADVERTISEMENT

–ಜಿ.ವಿ. ಆನಂದ್, ಬಾಗೇಪಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.