ADVERTISEMENT

‘ಪಾಪು’– ‘ಚಾಳಿ’!

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST

‘ಸಮಗ್ರ ಕರ್ನಾಟಕ ನೋಡದ ಕುವೆಂಪು: ಪಾಪು ಟೀಕೆ’ (ಪ್ರ.ವಾ., ನ. 20). ಇದು ‘ಪಾಪು ಚಾಳಿ’ ಎನ್ನಬಹುದು! ನಾನು 78 ನೆಯ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾದಾಗಲೂ, ನಾನು ಕರ್ನಾಟಕವನ್ನೆಲ್ಲ ನೋಡಿಲ್ಲ ಎಂದು ‘ಪಾಪು’ ಎರಡು ಮೂರು ಕಡೆ ‘ಪ್ರಲಾಪಿಸಿದರು!’ (ಒಂದೆಡೆ ‘ಕುಂವೀ’ ಅವರ ಎದುರಿಗೇ ತಕ್ಕ ಉತ್ತರ ಕೊಟ್ಟರು.)

‘ಪಾಪು’ ಸಮಗ್ರ ಕರ್ನಾಟಕವನ್ನು ನೋಡಿದ್ದಾರೆಯೆ? ಏಕಾದರೂ ನೋಡಬೇಕು? ಕುವೆಂಪು ಕುಳಿತಲ್ಲಿಯೆ ಕನ್ನಡಕಟ್ಟಿದ ‘ಅನಿಕೇತನ ಚೇತನ’
(ಕುಟೀಚಕ) ಎಂಬುದು ಮುಖ್ಯ ವಿಚಾರ.

ವಾಸ್ತವವಾಗಿ, ಆಚಾರ‍್ಯ ‘ಶ್ರೀ’ಯವರು ಕುವೆಂಪು ಅವರನ್ನು ಕರೆದರಂತೆ: ‘ಬನ್ನಿ, ಕರ್ನಾಟಕವನ್ನೆಲ್ಲ ಸುತ್ತಿ ಜಾಗೃತಿ ಮೂಡಿಸೋಣ!’ ಕುವೆಂಪು ಆ ಕರೆಯನ್ನು ನಯವಾಗಿ ನಿರಾಕರಿಸಿದರಂತೆ: ‘ನನ್ನ ಧರ್ಮಂ ನನಗೆ, ನಿಮ್ಮ ಧರ್ಮಂ ನಿಮಗೆ!’ (ಇಬ್ಬರದೂ ಕನ್ನಡದ ‘ಧರ್ಮ’ವೇ). ಆದರೂ ಕುವೆಂಪು ಅವರ ಮೇಲೆ ‘ಶ್ರೀ’ ಪ್ರಭಾವ ಸಾಕಷ್ಟಿದೆ.

ADVERTISEMENT

–ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.