ADVERTISEMENT

ಸಂಜೀವ್‌ ಕಪೂರ್‌ ಖಾನಾ ಖಜಾನಾ

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST

‘ಖಾನಾ ಖಜಾನಾ’ ಅಡುಗೆ ಕಾರ್ಯಕ್ರಮದ ಮೂಲಕ ಮನೆಮಾತಾಗಿರುವವರು ಶೆಫ್‌ ಸಂಜೀವ್‌ ಕಪೂರ್‌. ಸಾಂಪ್ರದಾಯಿಕ, ಚೈನೀಸ್‌, ಕಾಂಟಿನೆಂಟಲ್‌...ಹೀಗೆ ಜಗತ್ತಿನ ಎಲ್ಲಾ ಬಗೆಯ ಅಡುಗೆಗಳನ್ನು ಮಾಡಿ ವೀಕ್ಷಕರಿಗೆ ಉಣಬಡಿಸುತ್ತಿರುವ ಸಂಜೀವ್‌ ಅವರಿಗೆ ಬೆಸ್ಟ್‌ ಎಕ್ಸಿಕ್ಯೂಟಿವ್‌ ಶೆಫ್‌ ಆಫ್‌ ಇಂಡಿಯಾ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಸಂಜೀವ್‌ಕಫೂರ್‌ ಅವರ ಯೂಟ್ಯೂಬ್‌ ಚಾನೆಲ್‌ (sanjeev kapoor youtube channel), ಬ್ಲಾಗ್‌ (www.sanjeevkapoor.com) ಒಂದು ಬಾರಿ ಭೇಟಿ ನೀಡಿದರೆ ತರಹೇವಾರಿ ಅಡುಗೆಗಳ ಮಾಹಿತಿ ರಾಶಿಯೇ ಸಿಗುತ್ತದೆ.

ಆರೋಗ್ಯಕರ ಸಲಾಡ್‌, ಸ್ಮೂದಿ, ಜ್ಯೂಸ್‌, ಬೇರೆ ಬೇರೆ ಕಡೆಯ ಬಗೆ ಬಗೆ ಬಿರಿಯಾನಿ ಮಾಡುವ, ಪಲ್ಯ, ಸೂಪ್‌ ವಿಧಾನ ಹೀಗೆ ಸಾವಿರಾರು ಬಗೆಯ ಅಡುಗೆಗಳ ಮಾಹಿತಿಗಳು ಇಲ್ಲಿ ಲಭ್ಯ. ಹುಟ್ಟುಹಬ್ಬದ ಪಾರ್ಟಿ, ಫ್ಯಾಮಿಲಿ ಗೆಟ್‌ ಟುಗೆದರ್‌, ಕಾಕ್‌ಟೇಲ್‌ ಪಾರ್ಟಿ, ಅಡುಗೆ ಬಾರದವರಿಗೆ ಸುಲಭವಾಗಿ ತಯಾರಿಸಬಹುದಾದ ಆರೋಗ್ಯಕರ ಅಡುಗೆ, ಮಕ್ಕಳ ಅಡುಗೆಗಳು, ರೆಸ್ಟೊರೆಂಟ್‌ ರುಚಿಯ ತಿನಿಸು, ಹೊಸಮದುಮಕ್ಕಳಿಗಾಗಿ ಸುಲಭ ಅಡುಗೆ..ಹೀಗೆ ನಾನಾ ಬಗೆಯ ಅಡುಗೆಗಳನ್ನು ಸಂಜೀವ್‌ ಕಪೂರ್‌ ಮಾಡಿ ತೋರಿಸಿದ್ದಾರೆ.

ಯೂಟ್ಯೂಬ್‌ ಚಾನೆಲ್‌ನಲ್ಲಿ ಅಡುಗೆ ಮಾಡುತ್ತಿರುವ ವಿಡಿಯೊ ಜೊತೆಗೆ, ಅದರ ಮಾಹಿತಿಯನ್ನೂ ಇಂಗ್ಲಿಷ್‌ನಲ್ಲಿ ವಿವರಿಸಿದ್ದಾರೆ. ಬಗೆ ಬಗೆ ಅಡುಗೆ ಕಲಿಯಲು ಇಚ್ಛೆ ಉಳ್ಳವರು ಗೂಗಲ್‌ನಲ್ಲಿ sanjeev kapoor khazana ಹುಡುಕಿದರಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.