ADVERTISEMENT

ಸಸ್ಯಾಹಾರಿ ಅಡುಗೆಗಳ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಸಸ್ಯಾಹಾರಿ ಅಡುಗೆಗಳ ಮಾಹಿತಿ
ಸಸ್ಯಾಹಾರಿ ಅಡುಗೆಗಳ ಮಾಹಿತಿ   

ಕನ್ನಡದಲ್ಲಿ ಅಡುಗೆ ಬಗ್ಗೆ ಮಾಹಿತಿ ನೀಡುವ ಅನೇಕ ಬ್ಲಾಗ್‌ಗಳು ಇವೆ. ಅದರಲ್ಲಿ ಕುಮುದ ಶಂಕರ್‌ ಅವರ ‘adige recipes- ಅಡಿಗೆ ಸವಿರುಚಿ’ ಕೂಡ ಒಂದು.

ಸಸ್ಯಾಹಾರಿ ಅಡುಗೆಗಳ ಮಾಹಿತಿ ಇಲ್ಲಿದ್ದು, ಇಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಮುಂಬೈ ಭಾಗದ ಅಡುಗೆಗಳ ಮಾಹಿತಿಗಳು ಇಲ್ಲಿವೆ. ಥರೇವಾರಿ ಉಂಡೆಗಳು, ಚಟ್ನಿಪುಡಿಗಳು, ಬಗೆ ಬಗೆ ದೋಸೆಗಳು, ಪಲಾವ್‌, ಭಾತ್‌ಗಳ ಪುಡಿಗಳನ್ನು ಮಾಡುವ ವಿಧಾನಗಳು ಇಲ್ಲಿವೆ.

ಈ ಬ್ಲಾಗ್‌ನಲ್ಲಿ ಬಜ್ಜಿ ,ಅಂಬೋಡೆ, ಖೀರು, ಹಲ್ವ, ರಾಗಿ ಮುದ್ದೆ, ಸೀಕರಣೆ, ಉಸಲಿಗಳು, ಕಡುಬು, ರಸಂ ಹೀಗೆ ಅನೇಕ ಬಗೆಯ ಸಾಂಪ್ರದಾಯಿಕ ಅಡುಗೆಗಳ ಮಾಹಿತಿಗಳು ಲಭ್ಯವಿದ್ದು, ಹಬ್ಬಗಳ ಸಂದರ್ಭಗಳಲ್ಲಿ ಮಾಡಬಹುದಾದ ವಿಶೇಷ ಅಡುಗೆಗಳ ಪಟ್ಟಿಯೇ ಇಲ್ಲಿ ಸಿಗುತ್ತವೆ. ಈ ಬ್ಲಾಗ್‌ನಲ್ಲಿ ಅಡುಗೆಗಳ ಬಗ್ಗೆ ಮಾಹಿತಿ ಮಾತ್ರ ಇದೆ. ಲಿಂಕ್‌– http://indiankannadarecipes.blogspot.in 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.