ADVERTISEMENT

ಆ್ಯಪಲ್‌ಗಳು ಕೈಗೆಟುಕುತ್ತಿವೆ

ಪೃಥ್ವಿರಾಜ್ ಎಂ ಎಚ್
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಆ್ಯಪಲ್‌ಗಳು ಕೈಗೆಟುಕುತ್ತಿವೆ
ಆ್ಯಪಲ್‌ಗಳು ಕೈಗೆಟುಕುತ್ತಿವೆ   

ಹೊಸ ರೂಪದಲ್ಲಿ, ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವ ಆ್ಯಪಲ್ ಸಂಸ್ಥೆಯ ಉತ್ಪನ್ನಗಳು ಎಲ್ಲರ ಗಮನವನ್ನು ಸೆಳೆಯುತ್ತವೆ. ಇತರೆ ಸಂಸ್ಥೆಗಳ ಉತ್ಪನ್ನಗಳಿಗೆ ಹೋಲಿಸಿದರೆ ಸ್ಟೀವ್ಸ್ ಜಾಬ್ಸ್ ಅವರ್ ‘ಆ್ಯಪಲ್’ಗಳು ತುಂಬಾ ದುಬಾರಿ.

ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದರೂ ಖರೀದಿಗೆ ಹಿಂದೇಟು ಹಾಕಲು ದುಬಾರಿ ದರವೇ ಕಾರಣ. ಆದರೆ, ಆ್ಯಪಲ್‌ನ ಕೆಲವು ಉತ್ಪನ್ನಗಳು ಈಗ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿವೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಈಗಲೂ ಖ್ಯಾತಿ ಕುಗ್ಗಿಲ್ಲ

ADVERTISEMENT

ಕಡಿಮೆ ಗಾತ್ರದ ಮತ್ತು ನಾಜೂಕಾಗಿ ಇರುವಂತಹ ಟ್ಯಾಬ್ ಬಯಸುವವರಿಗೆ ‘ಐಪ್ಯಾಡ್ ಮಿನಿ 4’ ಸೂಕ್ತ ಸಾಧನ. ಬಳಸಿಕೊಳ್ಳಲು ಸುಲಭವಾಗುವಂತೆ ತಯಾರಿಸಿರುವ ಇದು ತಂತ್ರಜ್ಞಾನ ಪ್ರಿಯರ ನೆಚ್ಚಿನ ಸಾಧನ.

7.9 ಇಂಚಿನ ಪರದೆ ಹೊಂದಿರುವ ಇದರಲ್ಲಿ ‘ಎ-8’ ಪ್ರೊಸೆಸರ್ ಅಳವಡಿಸಲಾಗಿದೆ. ಎರಡು ಕ್ಯಾಮರಾಗಳನ್ನು (ಹಿಂಬದಿ 8 ಮತ್ತು ಮುಂಬದಿ 1.2 ಮೆಗಾಪಿಕ್ಸಲ್) ಅಳವಡಿಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆ ಕೆಲಸ ಮಾಡುತ್ತದೆ.

ಎರಡು ಮಾದರಿಗಳಲ್ಲಿ ಲಭ್ಯವಿದೆ.

128 ಜಿಬಿ ಮತ್ತು ವೈಫೈ ಸೌಲಭ್ಯ ಹೊಂದಿರುವ ಸಾಧನ  ₹33,800

128 ಜಿಬಿ, ವೈಫೈ ಸೌಲಭ್ಯ ಮತ್ತು ಸಿಮ್ ಅಳವಡಿಸಬಹುದಾದ ಸಾಧನದ ಬೆಲೆ ₹44,500

**

ಕಂಪ್ಯೂಟರ್ ಗೇನೂ ಕಡಿಮೆ ಇಲ್ಲ ‘ಐಪ್ಯಾಡ್ ಪ್ರೊ 12.9’

ಕಚೇರಿ ಕೆಲಸಗಳಿಗಾಗಿ ಬಳಸುವ ಹೈಎಂಡ್ ಕಂಪ್ಯೂಟರ್  ಮತ್ತು ಐ ಮ್ಯಾಕ್ ರೀತಿಯಲ್ಲೇ ಇದೂ ಕೆಲಸ ಮಾಡುತ್ತದೆ. ಇದರ ಪರದೆ ಗಾತ್ರ 12.9 ಇಂಚು. ಹೆಚ್ಚು ಸಾಮರ್ಥ್ಯದ ‘ಎ10ಎಕ್ಸ್’ ಪ್ರೊಸೆಸರ್ ಬಳಸಲಾಗಿದೆ.

ಮಲ್ಟಿಟಾಸ್ಕಿಂಗ್ ಸೌಲಭ್ಯವೂ ಇರುವ ಈ ಸಾಧನದಲ್ಲಿ ಎರಡು ಅಥವಾ ಮೂರು ಅಪ್ಲಿಕೇಷನ್‌ಗಳನ್ನು ಒಮ್ಮೆಗೆ ಬಳಸಬಹುದು. ದಾಖಲೆಗಳು, ಚಿತ್ರಗಳು ಮತ್ತು ವಿಡಿಯೊಗಳ ಎಡಿಟಿಂಗ್‌ಗೂ ನೆರವಾಗುತ್ತದೆ.

4ಕೆ ವಿಡಿಯೊಗಳನ್ನು ಎಡಿಟ್ ಮಾಡಿ ಗುಣಮಟ್ಟ ಪರೀಕ್ಷಿಸಲು ಇದು ಸಮರ್ಥ ಸಾಧನವಾಗಿದೆ. ಇದು ಕೂಡ ಡ್ಯುಯಲ್ ಕ್ಯಾಮೆರಾಗಳನ್ನು (ಹಿಂಬದಿ 12, ಮುಂದೆ 7 ಮೆಗಾಪಿಕ್ಸಲ್) ಒಳಗೊಂಡಿದೆ. 4ಕೆ ರೆಸಲ್ಯೂಷನ್ ವಿಡಿಯೊಗಳನ್ನು ಚಿತ್ರಿಸಬಹುದು. ಸ್ಮಾರ್ಟ್ ಕನೆಕ್ಟರ್‌ಗಳ ಸಹಾಯದಿಂದ ಕಿಬೋರ್ಡ್ ಜೋಡಿಸಿ ಲ್ಯಾಪ್ ಟಾಪ್ ರೀತಿ ಬಳಸಿಕೊಳ್ಳಬಹುದು.

ಆರು ಮಾದರಿಗಳಲ್ಲಿ ಲಭ್ಯವಿದೆ.

64ಜಿಬಿ, ವೈ-ಫೈ; ₹ 63,500

246ಬಿಬಿ, ವೈ-ಫೈ; ₹ 76,200

512 ಬಿಬಿ, ವೈ-ಫೈ; ₹ 93,200

64 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹ 74,100

256 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹ 86,800

512 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹ 1,03,800

****

ಸ್ವಲ್ಪ ಚಿಕ್ಕದು ಐಪ್ಯಾಡ್ ಪ್ರೊ 10.5

ಇದು ಗ್ಯಾಜೆಟ್‌ ಪ್ರಿಯರ ನೆಚ್ಚಿನ ಸಾಧನ. 10.5 ಇಂಚಿನ ಪರದೆ ಹೊಂದಿರುವ ಇದರಲ್ಲಿ ಫೋಟೊ ಎಡಿಟಿಂಗ್, ವಿಡಿಯೊ ಎಡಿಟಿಂಗ್ ಮಾಡುವುದು ಸುಲಭ. ಎ10ಎಕ್ಸ್ ಪ್ರೊಸೆಸರ್ ಬಳಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆ ಕೆಲಸ ಮಾಡುತ್ತದೆ.

ಆರು ಮಾದರಿಗಳಲ್ಲಿ ಲಭ್ಯವಿದೆ

64 ಜಿಬಿ, ವೈ-ಫೈ; ₹50,800

256 ಜಿಬಿ, ವೈ-ಫೈ; ₹63,500

512 ಜಿಬಿ, ವೈ-ಫೈ; ₹80,500

64 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹61,400

256 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹74,100

512 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹91,100

**

ಬಜೆಟ್‌ ದರದ ಐಪ್ಯಾಡ್ (2018)

ಈಚೆಗಷ್ಟೇ ಈ ಸಾಧನ ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿರುವ ಆ್ಯಪಲ್ ಸಂಸ್ಥೆಯ ಮೊದಲ ಸಾಧನ. ಕಳೆದ ವರ್ಷ ಹೈ ಎಂಡ್ ಮಾದರಿಯಲ್ಲಿ ತಂತ್ರಜ್ಞಾನ ಪ್ರಿಯರ ಗಮನ ಸೆಳೆದ ‘ಐ ಪ್ಯಾಡ್ ಪ್ರೊ’ನ ಸಹೋದರನಂತಿದೆ.

ಎ-10 ಪ್ರೊಸೆಸರ್ ಒಳಗೊಂಡಿರುವ ಈ ಸಾಧನ ಮಿಂಚಿನ ವೇಗದಲ್ಲಿ ಕೆಲಸ ಮಾಡುತ್ತದೆ. 9.7 ಇಂಚಿನ ಪರದೆ ಹೊಂದಿದೆ.

ವಿದ್ಯಾರ್ಥಿಗಳು ಕಾಲೇಜ್ ನೋಟ್ಸ್ ಬರೆಯಲು ನೆರವಾಗುವಂತೆ ಹೊಸದಾಗಿ ‘ಪೆನ್ಸಿಲ್ ಸ್ಟೈಲಸ್’ ಸೌಲಭ್ಯ ಅಳವಡಿಸಲಾಗಿದೆ. ಉದ್ಯೋಗಿಗಳು ಪ್ರಾಜೆಕ್ಟ್ ಇನ್ ಪುಟ್ಸ್ ಬರೆದಿಟ್ಟುಕೊಳ್ಳಲು, ಸಂಗ್ರಹಿಸಲು ಉಪಯುಕ್ತ. ಕಲಾವಿದರಿಗಾದರೆ ಕ್ಯಾನ್ವಾಸ್ ರೀತಿ ಬಳಕೆಯಾಗುತ್ತದೆ.

ಆ್ಯಪಲ್ ಸೆನ್ಸಿಲ್ ಬೆಲೆ ದುಬಾರಿ ಎನಿಸಿದರೆ, ಇತರ ಸಂಸ್ಥೆಗಳ ಸೆನ್ಸಿಲ್‌ಗಳನ್ನು ಬಳಸಿಕೊಳ್ಳಬಹುದು. ಹಿಂಬದಿ 8 ಮೆಗಾಪಿಕ್ಸೆಲ್ ಕ್ಯಾಮೆರಾ, ಮುಂದೆ ಫೇಸ್ ಟೈಮ್ ಎಚ್‌ಡಿ ಕ್ಯಾಮೆರಾ (1.2 ಮೆಗಾಪಿಕ್ಸೆಲ್ ) ಇದೆ. ಟಚ್ ಐ.ಡಿ ಫಿಂಗರ್ ಪ್ರಿಂಟ್ ಸೆನ್ಸರ್ ಮೂಲಕ ಲಾಕ್, ಅನ್ ಲಾಕ್ ಮಾಡಬಹುದು.

ಮಲ್ಟಿಟಾಸ್ಕಿಂಗ್ ಪರದೆ ಇದ್ದು, ಒಮ್ಮೆಗೆ ಎರಡು ಮೂರು ತಂತ್ರಾಂಶಗಳನ್ನು ಬಳಸಿಕೊಳ್ಳಬಹುದು. ಎಆರ್ ತಂತ್ರಜ್ಞಾನಕ್ಕೂ ಸಹಕರಿಸುತ್ತದೆ. ಬ್ಲೂಟೂತ್ ಮೂಲಕ ಕೀಬೋರ್ಡ್ ಜೋಡಿಸಬಹುದು.

ಇದು ನಾಲ್ಕು ಮಾದರಿಗಳಲ್ಲಿ ಲಭ್ಯವಿದೆ.

32 ಜಿಬಿ, ವೈ-ಫೈ; ₹28,900 

128 ಜಿಬಿ, ವೈ-ಫೈ; ₹35,700

32 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹38,000 

128 ಬಿಬಿ, ವೈ-ಫೈ ಸಿಮ್ ಸಪೋರ್ಟ್; ₹46,300

**

ಫೋನ್‌ ಬದಲಿಗೆ ವಾಚ್‌ ಬಳಸಿ

ಆ್ಯಪಲ್ ವಾಚ್ ಸಿರೀಸ್3 ಕೈಗೆ ಧರಿಸಿದರೆ ಫೋನ್ ಮರೆತರೂ ಸಮಸ್ಯೆ ಇಲ್ಲ. ಇದರ ಮೂಲಕವೇ ಕರೆ ಮಾಡಬಹುದು. ಸಂದೇಶಗಳನ್ನು ಕಳುಹಿಸಬಹುದು.

ಫೋನ್‌ನೊಂದಿಗೆ ನಿತ್ಯ ಮಾಡುವಂತಹ ಬಹುತೇಕ ಕೆಲಸಗಳನ್ನು ಮಾಡಬಹುದು.  ಇದರೊಳಗೆ ‘ಇ-ಸಿಮ್’ ಅಳವಡಿಸಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಇ-ಸಿಮ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಬಂದಿರುವ ಮೊದಲ ಸ್ಮಾರ್ಟ್ ವಾಚ್ ಇದು. ಪ್ರಸ್ತುತ ಜಿಯೊ ಮತ್ತು ಏರ್‌ಟೆಲ್ ನೆಟ್‌ವರ್ಕ್‌ ಸೇವೆಯಲ್ಲಿ ಮಾತ್ರ ಲಭ್ಯವಿವೆ.

ಇದರ ಅಂತರ್ಗತ ಮೆಮೊರಿ 16ಜಿಬಿ. ಡ್ಯುಯಲ್ ಕೋರ್ ಎಸ್ 3 ಪ್ರೊಸೆಸರ್ ಬಳಸಲಾಗಿದೆ. ವಾಟರ್ ಫ್ರೂಪ್ ರಕ್ಷಣೆ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.