ADVERTISEMENT

ಹೊಸ ರೂಪ ಪಡೆದಿದೆ IRCTC ವೆಬ್‌ಸೈಟ್

ರಶ್ಮಿ ಕಾಸರಗೋಡು
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಭಾರತೀಯ ರೈಲ್ವೆಯ ಆನ್‌ಲೈನ್ ಪೋರ್ಟಲ್ IRCTC ಹೊಸ ವಿನ್ಯಾಸದೊಂದಿಗೆ ಬಳಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಲುಕ್ ಪಡೆದುಕೊಂಡಿದೆ. ಹೊಸ ವಿನ್ಯಾಸದ ಈ ವೆಬ್ ಸೈಟ್ ಇದೀಗ ಮತ್ತಷ್ಟು 'ಬಳಕೆದಾರ ಸ್ನೇಹಿ’ ಆಗಿ ಬದಲಾಗಿದೆ. ರೈಲು ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಲು ಸುಲಭವಾಗುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಸದ್ಯ ಈಗಿರುವ IRCTC ವೆಬ್ ಸೈಟ್ ಓಪನ್ ಮಾಡಿದರೆ 'Try new Version of Website' ಎಂದು ಸೂಚಿಸುವ ಕೆಂಪು ಬಣ್ಣದ icon ಕಾಣಿಸುತ್ತದೆ. ಇದನ್ನು ಕ್ಲಿಕ್ ಮಾಡಿದ ಕೂಡಲೇ ವೆಬ್‌ಸೈಟ್ ನ beta version ತೆರೆದುಕೊಳ್ಳುತ್ತದೆ. ಈ trail version ಇನ್ನೂ 13 ದಿನಗಳವರೆಗೆ ಇರಲಿದ್ದು, ವೆಬ್‌ಸೈಟ್ ಅನ್ನು ಮತ್ತಷ್ಟು ಅಂದಗಾಣಿಸಲು ಬಳಕೆದಾರರ ಅಭಿಪ್ರಾಯಗಳನ್ನು ಕೋರಿದೆ.

ಹೊಸತು ಏನಿದೆ?
ಸೀಟು ಚೆಕ್ ಮಾಡಲು ಲಾಗಿನ್ ಬೇಡ ಹೊಸವಿನ್ಯಾಸದ ಈ ವೆಬ್ ಸೈಟ್‌ನಲ್ಲಿ ಲಾಗಿನ್ ಆಗದೆಯೇ ರೈಲು ಹುಡುಕಾಟ, ಲಭ್ಯವಿರುವ ಸೀಟು ಎಲ್ಲವನ್ನೂ ಪರಿಶೀಲಿಸಬಹುದು. ಇದರಿಂದಾಗಿ ಬಳಕೆದಾರರಿಗೆ ಸಮಯ ಉಳಿಸಬಹುದು.

ADVERTISEMENT

ಫಾಂಟ್ ಗಾತ್ರ ಬದಲಿಸಿ: ನಿಮಗೆ ಓದಲು ಅನುಕೂಲವಾಗುವಂತೆ ವೆಬ್ ಸೈಟ್ ಫಾಂಟ್ ಗಾತ್ರವನ್ನು ಬದಲಿಸಬಹುದು.

ಪ್ರಯಾಣ ಪ್ಲಾನಿಂಗ್ ಸುಲಭ
ರೈಲು , ಪ್ರಯಾಣದ ಸ್ಥಳ,ಹೊರಡುವ/ ತಲುಪುವ ಸಮಯಕ್ಕೆ ಅನುಗುಣವಾಗಿ ಫಿಲ್ಟರ್ ಮಾಡುವ ವ್ಯವಸ್ಥೆ ಇರುವುದರಿಂದ ಪ್ರಯಾಣದ ಪ್ಲಾನಿಂಗ್ ಸುಲಭವಾಗಲಿದೆ.

ಎಲ್ಲವೂ ಒಂದೆಡೆ ಲಭ್ಯ: ರೈಲು ಸಂಖ್ಯೆ , ರೈಲಿನ ಹೆಸರು, ಹೊರಡುವ/ತಲುಪುವ ಸ್ಥಳ, ಕ್ರಮಿಸುವ ದೂರ ಎಲ್ಲವೂ ಒಂದೇ ಸ್ಕ್ರೀನ್‌ನಲ್ಲಿ ಲಭ್ಯವಾಗಲಿದೆ.

ಅಷ್ಟೇ ಅಲ್ಲದೆ My transaction ಎಂಬ ಫಿಲ್ಟರ್ ಇರುವ ಕಾರಣ ಪ್ರಯಾಣಿಕರು ತಾವು ಬುಕ್ ಮಾಡಿದ ಟಿಕೆಟ್ ವಿವರ ಮತ್ತು ಹಿಂದಿನ ಪ್ರಯಾಣದ ವಿವರಗಳು ಇಲ್ಲಿ ಲಭ್ಯವಾಗಲಿವೆ.

Waiting list ನಲ್ಲಿದ್ದರೆ ಟಿಕೆಟ್ ಖಚಿತವಾಗುವುದೋ ಇಲ್ಲವೋ ಎಂಬುದನ್ನು ತೋರಿಸುವ ವ್ಯವಸ್ಥೆ ಈ ವೆಬ್‌ಸೈಟ್‌ನಲ್ಲಿದೆ. ಟಿಕೆಟ್ ಬುಕಿಂಗ್ ಮಾಡುವಾಗಲೇ ಅದು ಖಚಿತವಾಗುವುದೋ ಇಲ್ಲವೋ ಎಂಬ ಸುಳಿವನ್ನು ಇದು ನೀಡುತ್ತದೆ . ಒಂದೇ ವಿಂಡೋದಲ್ಲಿ ರೈಲು ಟಿಕೆಟ್ ರದ್ದುಗೊಳಿಸಲು, ಪ್ರಿಂಟ್ ತೆಗೆಯಲು ಇರುವ ಆಯ್ಕೆ ಗಳೂ ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.