ADVERTISEMENT

ವಾಟ್ಸ್ಆ್ಯಪ್‌ನಲ್ಲಿ ಫಾರ್ವರ್ಡ್ ಸಂದೇಶಗಳಿಗೆ ಸಿಗಲಿದೆ ಮುಕ್ತಿ!

ಪೃಥ್ವಿರಾಜ್ ಎಂ ಎಚ್
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ವಾಟ್ಸ್ಆ್ಯಪ್‌ನಲ್ಲಿ ಫಾರ್ವರ್ಡ್ ಸಂದೇಶಗಳಿಗೆ ಸಿಗಲಿದೆ ಮುಕ್ತಿ!
ವಾಟ್ಸ್ಆ್ಯಪ್‌ನಲ್ಲಿ ಫಾರ್ವರ್ಡ್ ಸಂದೇಶಗಳಿಗೆ ಸಿಗಲಿದೆ ಮುಕ್ತಿ!   

ವಾಟ್ಸ್ಆ್ಯಪ್ ಬಳಕೆದಾರರಿಗೆ ಫಾರ್ವರ್ಡೆಡ್ ಸಂದೇಶಗಳು ಸಹಜವಾಗಿಯೇ ಕಿರಿಕಿರಿ ಉಂಟುಮಾಡುತ್ತವೆ. ಸಂದೇಶ ಕಳುಹಿಸುವವರಿಗೆ ‘ಇಂಥ ಮೆಸೇಜೆ ಮಾಡಬೇಡಿ’ ಎಂದು ನೇರವಾಗಿ ಹೇಳಲಾಗದ ಸಂದಿಗ್ಧತೆಯಲ್ಲಿ ಬಳಕೆದಾರರು ಇರುತ್ತಾರೆ. ಬಳಕೆದಾರರನ್ನು ಇಂತಹ ಇಕ್ಕಟ್ಟಿನ ಪರಿಸ್ಥಿತಿಯಿಂದ ಹೊರತರುವ ಪ್ರಯತ್ನಕ್ಕೆ ವಾಟ್ಸ್ಆ್ಯಪ್ ಮುಂದಾಗಿದೆ. ಇದಕ್ಕಾಗಿ ನೂತನ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ.

ಇದೀಗ ಪಾರ್ವರ್ಡ್ ಮೆಸೇಜ್‌ಗಳನ್ನು ಪತ್ತೆ ಹಚ್ಚುವ ಬಹಳ ಸುಲಭದ ವೈಶಿಷ್ಟ್ಯವನ್ನು ವಾಟ್ಸ್ಆ್ಯಪ್ ವಿನ್ಯಾಸ ಮಾಡಿದೆ. ಬಳಕೆದಾರರು ಸ್ವೀಕರಿಸಿದ ಸಂದೇಶವನ್ನು ನೋಡುವ ಮೊದಲೇ ಇದು ಫಾರ್ವರ್ಡ್ ಮೆಸೇಜ್ ಎಂಬುದನ್ನು ಈ ವೈಶಿಷ್ಟ್ಯ ಹೇಳಲಿದೆ. ಬಳಕೆದಾರರು ಸ್ವೀಕರಿಸಿರುವ ಮೆಸೇಜ್ ಅನ್ನು ಸ್ಪರ್ಶಿಸಿದ ಕೂಡಲೇ ಇದು ಫಾರ್ವರ್ಡ್ ಮೆಸೇಜ್ ಹೌದೋ ಅಥವಾ ಅಲ್ಲವೊ ಎಂಬುದು ಗೊತ್ತಾಗಲಿದೆ.

‘ಈ ವೈಶಿಷ್ಟ್ಯ ಆ್ಯಂಡ್ರಾಯಿಡ್ (ಆವೃತ್ತಿ 2.18.179) ಮಾದರಿಯಲ್ಲಿ ಪ್ರಾಯೋಗಿಕವಾಗಿ ಬಳಕೆಯಲ್ಲಿದೆ’ ಎಂದು ವಾಟ್ಸ್ಆ್ಯಪ್ ತಿಳಿಸಿದೆ. ಐಎಎಸ್ ಮತ್ತು ಆ್ಯಂಡ್ರಾಯಿಡ್ ಮಾದರಿಗಳಲ್ಲೂ ಈ ವೈಶಿಷ್ಟ್ಯ ಕೆಲಸ ಮಾಡಲಿದೆ. ಈಗಾಗಲೇ ಈ ಫ್ಯೂಚರ್ ಬೀಟಾ ವೇದಿಕೆಯಲ್ಲಿ ಕೆಲಸ ಮಾಡುತ್ತಿದೆ.

ADVERTISEMENT

ಸಾಕಷ್ಟು ಬಳಕೆದಾರರನ್ನು ಸೆಳೆಯುವ ಪ್ರಯತ್ನವಾಗಿ ವಾಟ್ಸ್ಆ್ಯಪ್ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಮೀಡಿಯಾ ವಿಷಿಬಲ್ ಮತ್ತು  ಕಾಂಟ್ಯಾಕ್ಟ್ ಶಾರ್ಟ್‌ಕಟ್‌ ವೈಶಿಷ್ಟ್ಯಗಳನ್ನು ಪರಿಚಯಿಸಿತ್ತು. ಮೀಡಿಯಾ ವಿಬಲ್ ಮೂಲಕ ವಾಟ್ಸ್ಆ್ಯಪ್ ಮೂಲಕವೇ ಮೊಬೈಲ್ ಫೋನಿನಲ್ಲಿರುವ ಗ್ಯಾಲರಿ ಹಾಗೂ ಡೌನ್ ಲೋಡ್ ವಿಡಿಯೊ, ಚಿತ್ರಗಳು, ಫೈಲ್ ಗಳನ್ನು ವೀಕ್ಷಿಸಬಹುದು. ಈ ಮೊದಲು ವಾಟ್ಸ್ಆ್ಯಪ್ ನಿಂದ ಹೊರಹೋಗಿ ಗ್ಯಾಲರಿ ನೋಡಬೇಕಿತ್ತು. ಈಗ ಕಾಂಟ್ಯಾಕ್ಟ್ ಶಾರ್ಟ್‌ಕಟ್‌ನಲ್ಲಿ ಹೊಸ ಸಂಪರ್ಕ ಸಂಖ್ಯೆಗಳನ್ನು ನೋಡಬಹುದು. ಈ ಮೊದಲು ಚಾಟಿಂಗ್ ಲಿಸ್ಟ್ ನಲ್ಲಿ ನೋಡುವ ಅವಕಾಶವಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.