ADVERTISEMENT

ಶಿವಾಜಿ ಗಣೇಶನ್‌ ಬರಹ: ಪ್ರಧಾನಿ ಕಾರ್ಯಾಲಯದಲ್ಲಿ ಕನ್ನಡಿಗರ ದರ್ಬಾರು

ಶಿವಾಜಿ ಗಣೇಶನ್‌
Published 31 ಮೇ 2021, 21:30 IST
Last Updated 31 ಮೇ 2021, 21:30 IST
1997ರಲ್ಲಿ ತೆಹ್ರಿಯ ಭಾಗೀರಥಿ ನದಿ ದಡದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರವಾದಿ ಸುಂದರಲಾಲ್ ಬಹುಗುಣ ಅವರಿಗೆ ಪಾನಕ ನೀಡುವ ಮೂಲಕ ಸತ್ಯಾಗ್ರಹವನ್ನು ಕೈಬಿಡುವಂತೆ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮನವಿ ಮಾಡಿಕೊಂಡಿದ್ದರು ಚಿತ್ರ-: ಪ್ರಜಾವಾಣಿ ಆರ್ಕೈವ್
1997ರಲ್ಲಿ ತೆಹ್ರಿಯ ಭಾಗೀರಥಿ ನದಿ ದಡದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರವಾದಿ ಸುಂದರಲಾಲ್ ಬಹುಗುಣ ಅವರಿಗೆ ಪಾನಕ ನೀಡುವ ಮೂಲಕ ಸತ್ಯಾಗ್ರಹವನ್ನು ಕೈಬಿಡುವಂತೆ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮನವಿ ಮಾಡಿಕೊಂಡಿದ್ದರು ಚಿತ್ರ-: ಪ್ರಜಾವಾಣಿ ಆರ್ಕೈವ್   

ದೇವೇಗೌಡರು ಪ್ರಧಾನಿಯಾದ ಬಳಿಕ, ಗೌಡರು ರಾಷ್ಟ್ರ ರಾಜಕಾರಣ ಮತ್ತು ಹಿಂದಿ ಗೊತ್ತಿರದ ವ್ಯಕ್ತಿ ಎಂದುರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳು ತಮಗೆ ತಿಳಿದಂತೆ ಬಣ್ಣಿಸಿದ್ದವು. ದೇವೇಗೌಡರು ಈಹಿಂದೆ ಒಮ್ಮೆ ಲೋಕಸಭೆ ಸದಸ್ಯರಾಗಿ ರೈತ ಮತ್ತುಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗೆಗೆ ಸದನದಲ್ಲಿಮಾತನಾಡಿ ಕೆಲವು ಪತ್ರಕರ್ತರಿಗೆ ಪರಿಚಯವಾಗಿದ್ದರು.ಮುಖ್ಯಮಂತ್ರಿಯಾಗಿ ಕಾವೇರಿ ವಿಷಯದಲ್ಲಿ ದೆಹಲಿಪತ್ರಕರ್ತರ ಗಮನವನ್ನೂ ಸೆಳೆದಿದ್ದರು. ಆದರೆದೆಹಲಿಯಲ್ಲಿರುವ ಬಹುತೇಕ ಹಿಂದಿ, ಇತರೆ ಪ್ರಾದೇಶಿಕಭಾಷೆಗಳು ಹಾಗೂ ವಿದೇಶಿ ಪತ್ರಕರ್ತರಿಗೆ ದೇವೇಗೌಡರಪರಿಚಯ ಅಷ್ಟಕಷ್ಟೇ ಆಗಿತ್ತು.ದೇವೇಗೌಡರನ್ನು ದೆಹಲಿಯಲ್ಲಿನ ಈ ಪತ್ರಕರ್ತವರ್ಗಕ್ಕೆ ಪರಿಚಯ ಮಾಡುವ ಹೊಣೆ, ನರಸಿಂಹರಾವ್ ಅವರಅಧಿಕಾರಾವಧಿಯಲ್ಲಿ ಪ್ರಧಾನ ವಾರ್ತಾಧಿಕಾರಿ ಆಗಿದ್ದ ಮೈಸೂರಿನವರಾದಕನ್ನಡಿಗ ಎಸ್. ನರೇಂದ್ರ ಅವರದಾಗಿತ್ತು. ಗೌಡರುಪ್ರಧಾನಿಯಾದ ಬಳಿಕ ನರೇಂದ್ರ ಅವರು ಅದೇಹುದ್ದೆಯಲ್ಲಿ ಮುಂದುವರಿದರು.

ಪ್ರಧಾನಿಯಾದ ಮರುದಿನ ಜೂನ್ 2ರಂದು ಭಾನುವಾರಕರ್ನಾಟಕ ಭವನದಲ್ಲಿ (ಪ್ರಧಾನ ಮಂತ್ರಿ ಆದ ಬಳಿಕಗೌಡರು ಸುಮಾರು ಒಂದು ವಾರ ಕರ್ನಾಟಕ ಭವನದಲ್ಲಿಯೇ ವಾಸ್ತವ್ಯ ಮಾಡ್ದಿದರು) ಕರ್ನಾಟಕದವರನ್ನು ಹೊರತುಪಡಿಸಿ ಹಿಂದಿ, ಇಂಗ್ಲಿಷ್, ಇತರೆ ಪ್ರಾದೇಶಿಕ ಭಾಷೆಗಳು ಮತ್ತು ವಿದೇಶಿ ಪತ್ರಕರ್ತರನ್ನುಮಧ್ಯಾಹ್ನದ ಭೊಜನ ಕೂಟಕ್ಕೆ ಆಮಂತ್ರಿಸಲಾಗಿತ್ತು. ದೇವೇಗೌಡರು ತಾವು ಬೆಳೆದ ಪರಿಸ್ಥಿತಿ, ಅವರು ಬೆಳೆದು ಬಂದ ರಾಜಕೀಯ ಸ್ಥಿತಿಗತಿಯನ್ನು ವಿವರಿಸಿ ತಾವೊಬ್ಬ ವಿನಮ್ರ ರೈತ (ಹಂಬಲ್ ಫಾರ್ಮರ್) ಎಂದು ಪರಿಚಯಿಸಿಕೊಂಡರು.

ದೇವೇಗೌಡರು ದೆಹಲಿ ಗದ್ದುಗೆ ಏರಿದ ಮೇಲೆ ಪ್ರಧಾನಿ ಕಾರ್ಯಾಲಯಕ್ಕೂ (ನಾರ್ಥ್ ಬ್ಲಾಕ್) ಕರ್ನಾಟಕದ ಅಧಿಕಾರಿಗಳ ಗುಂಪನ್ನೇ ಕರೆದು ತಂದರು. ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಜಾಫರ್ ಸೈಫುಲ್ಲಾ ಕೆಲವು ತಿಂಗಳ ಕಾಲ ಸಂಪುಟ ಕಾರ್ಯದರ್ಶಿ ಆಗಿದ್ದರು. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಅವರ ಅಧಿಕಾರಾವಧಿಯಲ್ಲಿ ಮುಖ್ಯಕಾರ್ಯದರ್ಶಿಯಾಗಿದ್ದ ಸತೀಶ್ ಚಂದ್ರನ್ ಅವರು ಪ್ರಧಾನಿಯ ವಿಶೇಷ ಕಾರ್ಯದರ್ಶಿ ಆಗಿ ನೇಮಕಗೊಂಡರು.ಮತ್ತೊಬ್ಬ ಹಿರಿಯ ಅಧಿಕಾರಿ ಮೀನಾಕ್ಷಿ ಸುಂದರಂ ಅವರು ಪ್ರಧಾನಿಯವರ ಕಾರ್ಯದರ್ಶಿ ಆದರು. ಕಿರಿಯ ಐಎಎಸ್ ಅಧಿಕಾರಿಮಹೇಂದ್ರ ಜೈನ್ ಅವರು ಪ್ರಧಾನಿಯ ಆಪ್ತಕಾರ್ಯದರ್ಶಿಯಾದರು. ದೆಹಲಿಗೆ ಬರುವ ಮುನ್ನ ಮಹೇಂದ್ರಜೈನ್ ಹಾಸನ ಜಿಲ್ಲಾಧಿಕಾರಿಯಾಗಿದ್ದರು.

ADVERTISEMENT

ಇವರಲ್ಲದೆ, ಕರ್ನಾಟಕದಲ್ಲಿ ಗೌಡರ ಆಪ್ತಅಧಿಕಾರಿ ವಲಯದಲ್ಲಿ ಅವರ ಕುಟುಂಬಕ್ಕೂ ಅತ್ಯಂತಆಪ್ತರೆನಿಸಿದ್ದ ಕೆ.ಎ. ತಿಪ್ಪೇಸ್ವಾಮಿ ಕೆಲ ಕಾಲದ ಬಳಿಕ ಹೆಚ್ಚುವರಿಆಪ್ತಕಾರ್ಯದರ್ಶಿಯಾದರು. ಕೇಂದ್ರಸಚಿವರಾಗಿದ್ದ ಜಾಫರ್ ಷರೀಫ್, ರಾಮಕೃಷ್ಣ ಹೆಗಡೆಮುಂತಾದವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆಸಲ್ಲಿಸಿದ್ದ ಸಕಲೇಶಪುರ ತಾಲ್ಲೂಕಿನ ಬೈಕೆರೆ ನಾಗೇಶ್ಕೂಡ ವಿಶೇಷ ಕರ್ತವ್ಯಾಧಿಕಾರಿಯಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯವನ್ನು ಸೇರಿಕೊಂಡರು. ಇವರ ಜೊತೆಗೆ ಅವರ ಬಹುತೇಕ ಸಿಬ್ಬಂದಿ ಕೂಡ ಕನ್ನಡದವರೇ ಆಗಿದ್ದದ್ದು ವಿಶೇಷ. ಇದರಿಂದಾಗಿ ಹಿಂದಿ ಮತ್ತು ಇಂಗ್ಲಿಷ್ ವಾತಾವರಣವೇ ಇದ್ದ ಪ್ರಧಾನಿ ಕಾರ್ಯಾಲಯದಲ್ಲಿ ಕನ್ನಡದ ವಾತಾವರಣವೇ ಸೃಷ್ಟಿಯಾಯಿತು. ಕರ್ನಾಟಕದಪಾಲಿಗೆ ನಿಜಕ್ಕೂ ಇದೊಂದು ಸ್ಮರಣೀಯ ಕಾಲವಾಗಿತ್ತು.

ದೇವೇಗೌಡರು ಪ್ರಧಾನಿಯಾದ ಬಳಿಕ ಪ್ರಧಾನಿ ಕಾರ್ಯಾಲಯವಲ್ಲದೆ ಬೇರೆ ಸಂಸ್ಥೆಗಳಿಗೆಖ್ಯಾತ ತಜ್ಞರನ್ನು ಪ್ರಮುಖ ಸ್ಥಾನಗಳಿಗೆನೇಮಕ ಮಾಡಲಾಯಿತು. ಎಸ್. ರಾಮೇಗೌಡ ಅವರನ್ನು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿನೇಮಕ ಮಾಡಲಾಯಿತು. ಆರ್ಥಿಕ ತಜ್ಞ ಡಾ. ಡಿ. ಎಂ.ನಂಜುಂಡಪ್ಪ ಅವರು ರೈಲ್ವೆ ದರ ಕುರಿತ ಸಮಿತಿಗೆಅಧ್ಯಕ್ಷರನ್ನಾಗಿ ನೇಮಕಗೊಂಡರು. ಇವರಲ್ಲದೆ ಎಸ್. ಆರ್.ಬೊಮ್ಮಾಯಿ ಸಚಿವರಾಗಿದ್ದ ಮಾನವ ಸಂಪನ್ಮೂಲ ಇಲಾಖೆವ್ಯಾಪ್ತಿಗೆ ಬರುವ ವಿವಿಧ ಕಡೆಗಳಿಗೆ ಸುಮಾರು 50ಕ್ಕೂಹೆಚ್ಚು ಮಂದಿ ಕನ್ನಡಿಗರು ಸದಸ್ಯರಾಗಿನೇಮಕಗೊಂಡರು.ಮಾನವ ಸಂಪನ್ಮೂಲ ಸಚಿವಾಲಯವು ಶಿಕ್ಷಣ, ಸಂಸ್ಕೃತಿ ಮತ್ತು ಭಾಷೆ ಕುರಿತಂತೆ ಸಮುದ್ರ ಇದ್ದಹಾಗೆ. ಅಲ್ಲಿ ಮೊಗೆದಷ್ಟು ನೀರು ಮತ್ತು ಸಮುದ್ರದ ಉತ್ಪನ್ನಗಳು ಸಿಗುತ್ತವೆ. ಬೊಮ್ಮಾಯಿ ಅವರು ಸಚಿವರಾದ ಕಾರಣ ಮತ್ತು ಅವರ ಆಪ್ತ ಕಾರ್ಯದರ್ಶಿ ವಿ.ಪಿ ಬಳಿಗಾರ್ ಅವರಿದ್ದಕಾರಣ ಈ ಸಚಿವಾಲಯದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ದೊರೆಯಬಹುದಾದ ಹೆಚ್ಚು ಅನುಕೂಲಗಳನ್ನು ರಾಜ್ಯದ ವಿಶೇಷವಾಗಿ ಲಿಂಗಾಯತ ಮಠಗಳು ಪಡೆದವು. ಆಟದ ಮೈದಾನ, ರಂಗಮಂದಿರ ನಿರ್ಮಾಣ ಹೀಗೆ ಹಲವಾರು ಯೋಜನೆಗಳ ಮೂಲಕ ಲಕ್ಷಾಂತರ ರೂಪಾಯಿ ನೆರವನ್ನು ಪಡೆದದ್ದು ವಿಶೇಷ.

ಲೇಖಕ: ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರರಾಗಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.