ADVERTISEMENT

‘ಆತಂಕ–ಭಯ ಬಿಡಿ; ಸರ್ಕಾರದ ನಿರ್ದೇಶನ ಪಾಲಿಸಿ’

ಫಟಾಫಟ್‌...

ಡಿ.ಬಿ, ನಾಗರಾಜ
Published 20 ಏಪ್ರಿಲ್ 2020, 19:30 IST
Last Updated 20 ಏಪ್ರಿಲ್ 2020, 19:30 IST
ಡಾ.ಎಸ್.ಚಿದಂಬರ
ಡಾ.ಎಸ್.ಚಿದಂಬರ   

ಮೈಸೂರುಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಡಾ.ಎಸ್.ಚಿದಂಬರ ಸಂದರ್ಶನ
**

* ಕೊರೊನಾ ವೈರಸ್‌ ದೇಹ ಪ್ರವೇಶಿಸುವುದು ಹೇಗೆ..?
ಕಣ್ಣು, ಮೂಗು, ಬಾಯಿ ಮೂಲಕ. ಕೋವಿಡ್–19 ಪೀಡಿತರು ಕೆಮ್ಮಿದಾಗ, ಸೀನಿದಾಗ ವೈರಾಣು ಹೊರಹೊಮ್ಮುತ್ತವೆ. ಇವು ದೇಹ ಪ್ರವೇಶಿಸಲಿವೆ. ಪರೋಕ್ಷ ಸೇರ್ಪಡೆ ಅಪರೂಪ. ನೇರ ಸೇರ್ಪಡೆಯೇ ಹೆಚ್ಚು.

* ವೈರಸ್‌ನ ಜೀವಿತ ಅವಧಿ ಎಷ್ಟು..?
ಮನುಷ್ಯನ ದೇಹದೊಳಗೆ ಹೊಕ್ಕ ವೈರಸ್ 28 ದಿನ ಜೀವಂತವಾಗಿರಲಿದೆ. ಮೊದಲ ಏಳು ದಿನ ಗೋಚರಿಸಲ್ಲ. 14 ದಿನದಲ್ಲಿ ದೇಹದೊಳಗೆ ಬಲಾಢ್ಯಗೊಳ್ಳುತ್ತದೆ. 21 ದಿನದ ಅವಧಿಯವರೆಗೂ ಶಕ್ತಿ ವೃದ್ಧಿಸಿಕೊಂಡು ದೇಹದಿಂದ ಬಾಯಿ, ಮೂಗಿನ ಮೂಲಕ ಹೊರಹೊಮ್ಮುತ್ತದೆ. ನಂತರ ತನ್ನ ಶಕ್ತಿ ಕುಂದಿಸಿಕೊಳ್ಳುತ್ತದೆ. 28 ದಿನದೊಳಗೆ ದೇಹದಲ್ಲೇ ಸಾಯಲಿದೆ. ಇಲ್ಲದಿದ್ದರೇ ಪೀಡಿತರನ್ನೇ ಬಲಿ ಪಡೆಯಲಿದೆ.

ADVERTISEMENT

* ಫೀವರ್ ಕ್ಲಿನಿಕ್‌ನ ಕಾರ್ಯವೈಖರಿ ಹೇಗೆ?
ಜ್ವರ ಇದ್ದವರ ತಪಾಸಣೆ. ಅನುಮಾನ ಬಂದರೆ ಕ್ಲಿನಿಕ್‌ನಲ್ಲೇ ರಕ್ತ ತಪಾಸಣೆ. ಕೋವಿಡ್–19 ಶಂಕೆ ವ್ಯಕ್ತವಾದರೆ ಆಂಬುಲೆನ್ಸ್‌ನಲ್ಲಿ ಕೋವಿಡ್ ಆಸ್ಪತ್ರೆಗೆ ರವಾನೆ. ಅಲ್ಲಿನ ತಪಾಸಣೆಯಲ್ಲಿ ನೆಗೆಟಿವ್ ಬಂದರೆ ಮನೆಗೆ ಕಳುಹಿಸಿ ಎಚ್ಚರದಿಂದಿರಲು ಸೂಚನೆ. ಪಾಸಿಟಿವ್ ಬಂದರೇ ಆಸ್ಪತ್ರೆಯಲ್ಲೇ ಚಿಕಿತ್ಸೆ.

* ಕೊರೊನಾ ಹರಡುವಿಕೆ ಹೇಗಿದೆ?
ಸ್ಥಳದಿಂದ ಸ್ಥಳಕ್ಕೆ ವಿಭಿನ್ನವಾಗಿರಲಿದೆ. ನಮ್ಮಲ್ಲಿ ಹರಡುವಿಕೆಯ ಪ್ರಮಾಣ ದುಪ್ಪಟ್ಟು ಆಗ್ತಿಲ್ಲ. ಸಮುದಾಯಕ್ಕೂ ಹರಡುತ್ತಿಲ್ಲ.

* ನಿಯಂತ್ರಣದಲ್ಲಿದೆಯಾ?
ನಿಯಂತ್ರಣದಲ್ಲಿದೆ. ಪರೀಕ್ಷೆ ಪ್ರಮಾಣ ಹೆಚ್ಚಿದೆ. ಪಾಸಿಟಿವ್ ಆಗುವುದು ಕಡಿಮೆಯಿದೆ.

* ಮೈಸೂರಿಗರಲ್ಲಿ ಆತಂಕ ಹೆಚ್ಚಿದೆ?
ಆತಂಕ ಪಡಬೇಕಿಲ್ಲ. ಸರ್ಕಾರದ ನಿಯಮಾವಳಿ ಪಾಲಿಸಿದರೆ ಸಾಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಿ. ಆಗಾಗ್ಗೆ ಕೈ ತೊಳೆದುಕೊಳ್ಳಿ. ಅಂತರ ಕಾಪಾಡಿಕೊಂಡರೆ ಸಾಕು.

* ಕಾರ್ಖಾನೆ ಪ್ರಕರಣ ಭಯ ಹುಟ್ಟಿಸಿದೆಯಲ್ವಾ?
ಮೊದಲ ಪಾಸಿಟಿವ್ ಬಂದ ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡೆವು. ನೌಕರರನ್ನು ಕ್ವಾರಂಟೈನ್ ಮಾಡಿದೆವು. ಕೋವಿಡ್ ಪೀಡಿತರ ನೇರ, ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕ ನಿಗಾದಲ್ಲಿಟ್ಟಿದ್ದೇವೆ. ಪಾಸಿಟಿವ್ ಬಂದ ಎಲ್ಲರೂ ಜಿಲ್ಲಾಡಳಿತದ ನಿಗಾದಲ್ಲಿ ಇದ್ದವರೇ. ಆದ್ದರಿಂದ ಯಾರೂ ಭಯ ಪಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.