ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಬುಧವಾರ, 9–9–1970

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 15:00 IST
Last Updated 8 ಸೆಪ್ಟೆಂಬರ್ 2020, 15:00 IST
   

‘ನಿರಕ್ಷರತೆ ಹೋದರೇ ಪ್ರಜಾಸತ್ತೆಗೆ ಯಶಸ್ಸು’

ಬೆಂಗಳೂರು, ಸೆ. 8– ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ, ಸಮಾಜವಾದ, ಯೋಜನಾಬದ್ಧ ಬೆಳವಣಿಗೆ ಯಶಸ್ವಿಯಾಗಬೇಕಾದರೆ ಆದಷ್ಟು ಬೇಗ ನಿರಕ್ಷರತೆಯನ್ನು ತೊಡೆಯಬೇಕೆಂದು ಕೇಂದ್ರದ ಶಿಕ್ಷಣ ಸಚಿವ ಡಾ. ವಿ.ಕೆ.ಆರ್‌.ವಿ. ರಾವ್‌ರವರು ಇಂದು ಇಲ್ಲಿ ಕರೆ ನೀಡಿದರು.

ವಿಧಾನಸೌಧದಲ್ಲಿ ವಯಸ್ಕರ ಶಿಕ್ಷಣ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ರಾವ್‌ರವರು ‘ಅನಕ್ಷರತೆ ಮತ್ತು ಹಿಂದುಳಿದಿರುವಿಕೆ ಒಟ್ಟಾಗಿರುತ್ತವೆ’ ಎಂದರು.

ADVERTISEMENT

1980–81ರ ವೇಳೆಗೆ ಭಾರತದ ಜನಸಂಖ್ಯೆಯು 695 ದಶಲಕ್ಷದಷ್ಟಾಗಿ 1981ರಲ್ಲಿಯೂ ಸುಮಾರು 385 ದಶಲಕ್ಷ ಮಂದಿ ಅನಕ್ಷರಸ್ಥರು ಇರುವರೆಂದು ಅಂದಾಜು ಮಾಡಲಾಗಿದೆಯೆಂದೂ 15ರಿಂದ 44ರ ವಯೋವರ್ಗದಲ್ಲಿಯಾದರೂ ಅನಕ್ಷರತೆ ಇಲ್ಲದಂತೆ ಮಾಡಬೇಕಾಗಿದೆಯೆಂದೂ ತಿಳಿಸಿದರು.

ಮಹಾಜನ್‌ ವರದಿ ಪರಿಶೀಲನೆಗೆ ಸಂಸತ್‌ ಸಮಿತಿ: ಚವಾಣ್

ಪಣಜಿ, ಸೆ. 8– ಮಹಾಜನ್‌ ಆಯೋಗದ ವರದಿಯನ್ನು ಪರಿಶೀಲಿಸುವುದಕ್ಕಾಗಿ ಸಂಸತ್‌ ಸಮಿತಿಯೊಂದನ್ನು ನೇಮಕ ಮಾಡುವುದು ಮೈಸೂರು–ಮಹಾರಾಷ್ಟ್ರ ಗಡಿ ವಿವಾದದ ಇತ್ಯರ್ಥದ ಸಲಹೆಗಳಲ್ಲೊಂದಾಗಿದೆ ಎಂದು ಕೇಂದ್ರ ಅರ್ಥ ಮಂತ್ರಿ ಶ್ರೀ ವೈ.ಬಿ. ಚವಾಣ್‌ ಅವರು ಇಂದು ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.