ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ 13, ಆಗಸ್ಟ್‌ 1996

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 19:30 IST
Last Updated 12 ಆಗಸ್ಟ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಆಲಮಟ್ಟಿ: ತಜ್ಞರ ಖುದ್ದು ಸಮೀಕ್ಷೆ

ನವದೆಹಲಿ, ಆಗಸ್ಟ್‌ 12– ಆಲಮಟ್ಟಿ ಅಣೆಕಟ್ಟು ವಿವಾದವನ್ನು ಶೀಘ್ರವಾಗಿ ಪರಿಹರಿಸುವ ಮೊದಲ ಯತ್ನವಾಗಿ ಸಂಯುಕ್ತ ರಂಗದ ನಾಲ್ವರು ಮುಖ್ಯಮಂತ್ರಿಗಳು ಇಂದು ವಿವಾದದ ವಾಸ್ತವ ಸ್ಥಿತಿ ಅಧ್ಯಯನಕ್ಕೆ 9 ಮಂದಿ ತಜ್ಞರ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿ ಬುಧವಾರ ಆಲಮಟ್ಟಿಗೆ ಆಗಮಿಸಿ ಖುದ್ದು ಸಮೀಕ್ಷೆ ನಡೆಸಲಿದೆ.

ಪ್ರಧಾನಿ ನಿವಾಸದಲ್ಲಿ ಬೆಳಿಗ್ಗೆ ಸಭೆ ಸೇರಿದ ಜ್ಯೋತಿ ಬಸು, ಎಂ. ಕರುಣಾನಿಧಿ, ಲಾಲೂ ಪ್ರಸಾದ್ ಯಾದವ್‌ ಮತ್ತು ಪ್ರಫುಲ್ಲ ಕುಮಾರ್‌ ಮಹಂತ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರುಗಳ ಜತೆ ಚರ್ಚಿಸಿದರು. ಎರಡೂ ರಾಜ್ಯದವರು ತಮ್ಮ ವಾದಕ್ಕೆ ಅಂಟಿಕೊಂಡಿದ್ದ
ರಿಂದ ಸತ್ಯಶೋಧನಾ ಸಮಿತಿ ರಚಿಸಲು ನಿರ್ಧರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.