ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 27, 1996

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 23:00 IST
Last Updated 26 ಆಗಸ್ಟ್ 2021, 23:00 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಬೆಂಗಳೂರು, ಆಗಸ್ಟ್‌ 26– ಬೆಂಗಳೂರನ್ನು ವಿಶ್ವದಾದ್ಯಂತ 120 ರಾಷ್ಟ್ರಗಳಲ್ಲಿ ಬೆಳಗಿಸುವ ‘ವಿಶ್ವ ಸುಂದರಿ’ ಆಯ್ಕೆಯ ವರ್ಣರಂಜಿತ ಕಾರ್ಯಕ್ರಮಕ್ಕೆ ಇಲ್ಲಿ ಇಂದು ಹಸಿರು ನಿಶಾನೆ ತೋರಲಾಯಿತು.

‘ವಿಶ್ವ ಸುಂದರಿ’ ಸ್ಪರ್ಧೆ ನಡೆಸುವುದರಿಂದ ಹಿಡಿದು ಅದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳ ಸಾರಾಸಗಟು ಗುತ್ತಿಗೆ ಪಡೆದಿರುವ ಅಮಿತಾಭ್ ಬಚ್ಚನ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಎಬಿಸಿಎಲ್‌) ಸಂಸ್ಥೆ ಬರುವ ನವೆಂಬರ್‌ನಲ್ಲಿ ನಿರ್ವಹಿಸಲಿರುವ ಈ ದೃಶ್ಯ ವೈಭವಕ್ಕೆ ರಾಜ್ಯದ ಒಟ್ಟಾರೆ ಹಿತದೃಷ್ಟಿಯಿಂದ ಸರ್ಕಾರ ಎಲ್ಲಾ ರೀತಿಯ ಸಹಕಾರ– ನೆರವು ನೀಡಲಿದೆ ಎಂದು ಮುಖ್ಯಮಂತ್ರಿ
ಜೆ.ಎಚ್‌. ಪಟೇಲ್‌ ಪ್ರಕಟಿಸುವುದರೊಂದಿಗೆ ಈ ಕಾರ್ಯಕ್ರಮ ವಿಧ್ಯುಕ್ತ ಚಾಲನೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT