ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 30.7.1996

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 19:30 IST
Last Updated 29 ಜುಲೈ 2021, 19:30 IST
   

ಸರ್ಕಾರಿ ಉದ್ಯಮಗಳ ಸಮಸ್ಯೆ ನಿವಾರಣೆಗೆ ಕೇಂದ್ರ ಸಚಿವರ ಸಮಿತಿ

ನವದಹೆಲಿ, ಜುಲೈ 29– ಸರ್ಕಾರಿ ಕ್ಷೇತ್ರದ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಸಂಪುಟದ ಸಚಿವರ ಸಮನ್ವಯ ಸಮಿತಿಯೊಂದನ್ನು ರಚಿಸಬೇಕೆಂದು ಯೋಜನಾ ಆಯೋಗವು ಪ್ರಧಾನಿಗೆ ಮನವಿ ಮಾಡಿಕೊಂಡಿದೆ.

ಯೋಜನಾ ಖಾತೆಯ ಸ್ಟೇಟ್ ಸಚಿವ ಶ್ರೀ ಮೋಹನ್ ಧಾರಿಯಾ ಅವರು ಇಂದು ರಾಜ್ಯಸಭೆಯಲ್ಲಿ ಶ್ರೀ ಎ.ಜಿ. ಕುಲಕರ್ಣಿ
ಮತ್ತು ಶ್ರೀ ಬಿಪಿನ್ ಪಾಲ್‌ದಾಸ್‌ ಅವರ ಪ್ರಶ್ನೆಗಳಿಗೆ ಉತ್ತರವೀಯುತ್ತಾ ಈ ವಿಷಯವನ್ನು ತಿಳಿಸಿದರು.

ADVERTISEMENT

ವಿದ್ಯುತ್ ಬಳಕೆ ಸುರಕ್ಷತೆತನಿಖೆ ಮೂರು ವರ್ಷಕ್ಕೊಮ್ಮೆ

ಬೆಂಗಳೂರು, ಜುಲೈ 29–ಮೈಸೂರು ರಾಜ್ಯ ದಲ್ಲಿರುವ ಸುಮಾರು ಒಂಬತ್ತು ಲಕ್ಷ ವಿದ್ಯುತ್ ಬಳಕೆ ದಾರರ ಆವರಣಗಳ ವಿದ್ಯುತ್ ಪೂರೈಕೆ, ವೈರಿಂಗ್ ವ್ಯವಸ್ಥೆಯನ್ನು ಮೂರು ವರ್ಷಗಳಿಗೊಮ್ಮೆ ಪರೀಕ್ಷಿಸಿ, ಸರಿಪಡಿಸುವ ಕ್ರಮವನ್ನು ಕಡ್ಡಾಯವಾಗಿ ಜಾರಿಗೆ ತರುವ ಬಗ್ಗೆ ವಿದ್ಯುಚ್ಛಕ್ತಿ ಮಂಡಳಿಯು ಆಲೋಚಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.