ADVERTISEMENT

50 ವರ್ಷಗಳ ಹಿಂದೆ: ಶನಿವಾರ, 31–7–1970

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 19:45 IST
Last Updated 30 ಜುಲೈ 2021, 19:45 IST
   

ಅಂತರಿಕ್ಷದಲ್ಲಿ ಜಪಾನ್‌ ವಿಮಾನಗಳ ಡಿಕ್ಕಿ: 162 ಮಂದಿ ಸಾವು

ಟೋಕಿಯೊ, ಜುಲೈ, 30– ಜಪಾನಿನ ಬೋಯಿಂಗ್‌ ವಿಮಾನವೊಂದು ಇಂದು ಮಧ್ಯ ಗಗನದಲ್ಲಿ ವಾಯುಪಡೆಯ ಫೈಟರ್‌ ವಿಮಾನಕ್ಕೆ ಡಿಕ್ಕಿ ಹೊಡೆದ ಬಳಿಕ ಅಪಘಾತಕ್ಕೀಡಾಗಿ, ಅದರಲ್ಲಿದ್ದ ಎಲ್ಲಾ 162 ಮಂದಿ ಪ್ರಯಾಣಿಕರೂ ಸತ್ತರು. ಜಗತ್ತಿನ ವಿಮಾನಯಾನ ಇತಿಹಾಸದಲ್ಲೇ ಹಿಂದೆಂದೂ ಕಾಣಬಾರದಂಥ ಭೀಕರ ದುರಂತವಿದು.

ವಿಮಾನವು ಬೆಂಕಿ ಹೊತ್ತಿ ಉರಿಯಿತೆಂದೂ ವಿಮಾನ ಸಾರಿಗೆ ಸಂಸ್ಥೆಯಾದ ‘ಆಲ್‌ನಿಪ್ಪನ್‌ ಏರ್‌ವೇಸ್‌’ (ಎ.ಎನ್‌.ಎ) ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕರಗಳ್ಳತನ, ಕಪ್ಪು ಹಣಪತ್ತೆಗೆ ಬಿರುಸಿನ ಕ್ರಮ

ನವದೆಹಲಿ, ಜುಲೈ, 30– ಮುಚ್ಚಿಟ್ಟ ಮತ್ತು ಕರಗಳ್ಳತನವನ್ನು ಪತ್ತೆ ಹಚ್ಚಲು ಸರ್ಕಾರವು ಬಿರುಸಿನ ಕ್ರಮ ಕೈಗೊಳ್ಳಲಿದೆ ಎಂದು ಹಣಕಾಸು ಖಾತೆ ಸ್ಟೇಟ್‌ ಸಚಿವ ಕೆ.ಆರ್‌. ಗಣೇಶ್‌ ಅವರು ಇಂದು ರಾಜ್ಯಸಭೆಯಲ್ಲಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.