ADVERTISEMENT

50 ವರ್ಷಗಳ ಹಿಂದೆ: ಶನಿವಾರ 7–8–1971

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 16:41 IST
Last Updated 6 ಆಗಸ್ಟ್ 2021, 16:41 IST
   

ಕಾವೇರಿ ವಿವಾದ: ತಮಿಳುನಾಡು ದಾವಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೈಸೂರಿನ ‘ತಡೆಅರ್ಜಿ’ ಸಲ್ಲಿಕೆ

ನವದೆಹಲಿ, ಆ. 6– ಮೈಸೂರು ಸರ್ಕಾರಕ್ಕೆ ಪೂರ್ವಭಾವಿಯಾಗಿ ತಿಳಿವಳಿಕೆ ನೀಡದೆ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ತಮಿಳುನಾಡಿನ ದಾವಾ ಬಗೆಗೆ ಮುಂದಿನ ಕ್ರಮ ಕೈಗೊಳ್ಳಬಾರದೆಂದು ಕೋರುವ ‘ತಡೆ ಅರ್ಜಿ’ಯೊಂದನ್ನು ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮೈಸೂರು ರಾಜ್ಯ ಸಲ್ಲಿಸಿತು.

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದದಲ್ಲಿ ತಮಿಳುನಾಡು ಸರ್ಕಾರವು ದಾವಾ ಹೂಡಿದ್ದು, ಹೇಮಾವತಿ ಮತ್ತು ಕಪಿಲಾ ಯೋಜನೆಗಳ ಕಾಮಗಾರಿಯನ್ನು ಮುಂದುವರಿಸಿಕೊಂಡು ಹೋಗದಂತೆ ಮೈಸೂರು ತಾತ್ಕಾಲಿಕ ತಡೆ ನೀಡಬೇಕೆಂದು ಕೋರಿದೆ.

ADVERTISEMENT

ಮತಚೀಟಿಗಳ ಮೇಲೆ ಅಸಹಜ ಗುರುತು: ತನಿಖೆಗೆ ದೆಹಲಿ ಹೈಕೋರ್ಟ್‌ನ ನಿರ್ಧಾರ

ನವದೆಹಲಿ, ಆ. 6– ಲೋಕಸಭೆಗೆ ಮಾರ್ಚ್‌ ತಿಂಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಳಸಲಾದ ಬಹುಸಂಖ್ಯೆಗಳ ಮತಚೀಟಿಗಳು ಯಾವುದೋ ಯಾಂತ್ರಿಕ ಅಥವಾ ರಾಸಾಯನಿಕ ವಿಧಾನಗಳಿಂದ ಮಾಡಿದ ಗುರುತುಗಳನ್ನು ತೋರಿಸುತ್ತವೆ ಎಂಬ ಆಪಾದನೆಯ ಬಗ್ಗೆ ತನಿಖೆ ನಡೆಸಲು ದೆಹಲಿ ಹೈಕೋರ್ಟ್‌ ಇಂದು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.