ADVERTISEMENT

50 ವರ್ಷಗಳ ಹಿಂದೆ: ಗುರುವಾರ 12.8.1971

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:30 IST
Last Updated 11 ಆಗಸ್ಟ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸಂವಿಧಾನ ತಿದ್ದುಪಡಿ ಅಧಿಕಾರ ಮತ್ತೆ ಸಂಸತ್ತಿಗೆ

ನವದೆಹಲಿ, ಆ. 11– ಮೂಲಭೂತ ಹಕ್ಕುಗಳೂ ಸೇರಿ ಸಂವಿಧಾನದ ಯಾವುದೇ ಭಾಗವನ್ನಾದರೂ ತಿದ್ದುಪಡಿ ಮಾಡುವುದಕ್ಕೆ ಮತ್ತೆ ಅಧಿಕಾರ ಪಡೆದುಕೊಳ್ಳುವ ಸಂವಿಧಾನದ 24ನೇ ತಿದ್ದುಪಡಿಯ ಐತಿಹಾಸಿಕ ವಿಧೇಯಕವನ್ನು ಇಂದಿನ ರಾಜ್ಯಸಭೆಯ ಒಪ್ಪಿಗೆಯೊಡನೆ ಸಂಸತ್ತು ಅಂಗೀಕರಿಸಿದಂತಾಯಿತು.

ಈಗಾಗಲೇ ಲೋಕಸಭೆ ಅಂಗೀಕರಿಸಿರುವ ಈ ವಿಧೇಯಕವನ್ನು ರಾಜ್ಯಭೆಯು ಗಟ್ಟಿಯಾದ ಕರತಾಡನಗಳ ನಡುವೆ 177–3 ಮತಗಳಿಂದ ಒಪ್ಪಿಕೊಂಡಿತು.

ADVERTISEMENT

ಚೀನಾ ಕೇಡಿಗಿಂತ ರಷ್ಯಾ ಸಹವಾಸ ಮೇಲೆಂದ ರಾಜಾಜಿ

ಮದ್ರಾಸ್, ಆ. 11– ಚೀನಾದ ಕೇಡಿಗಿಂತಲೂ ರಷ್ಯಾ ವಿದೇಶಾಂಗ ಮಂತ್ರಿ ಗ್ರೋಮಿಕೋ ಅವರ ಸಹವಾಸ ಎಷ್ಟೋ ಮೇಲೆಂದು ಸ್ವತಂತ್ರ ಪಕ್ಷದ ನಾಯಕ ಸಿ. ರಾಜಗೋಪಾಲಾಚಾರಿ ಅವರು ತಿಳಿಸಿದ್ದಾರೆ.

ಭಾರತವನ್ನು ವಿಪತ್ತನಿಂದ ಸಂರಕ್ಷಿಸಲು ಇದಕ್ಕಿಂತ ಬೇರೇನೂ ಮಾರ್ಗಗಳಿಲ್ಲ ಎಂದು ಹೇಳಿರುವ ಶ್ರೀಯುತರು, ನಾವು ರಷ್ಯಾದ ಸಲಹೆ ಪಡೆಯಲೇಬೇಕಾಗಿರುವುದೆಂದು ಇತ್ತೀಚಿನ ‘ಸ್ವರಾಜ್ಯ’ದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.