ADVERTISEMENT

50 ವರ್ಷಗಳ ಹಿಂದೆ: ಶನಿವಾರ 14.8.1971

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 18:48 IST
Last Updated 13 ಆಗಸ್ಟ್ 2021, 18:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬ್ಯಾಂಕುಗಳಲ್ಲಿ ವಂಚನೆ ಪ್ರಕರಣಗಳ ನಿರೋಧಕ್ಕೆ ಉನ್ನತ ಅಧ್ಯಯನ ತಂಡ

ನವದೆಹಲಿ, ಆ. 13– ಸರ್ಕಾರಿ ವ್ಯಾಪ್ತಿಗೆ ಸೇರಿದ ಬ್ಯಾಂಕುಗಳಲ್ಲಿ ವಂಚನೆ ಪ್ರಕರಣ ಗಳನ್ನು ಹತ್ತಿಕ್ಕಲು ಇಡೀ ನಗದು ಹಣದ ವಹಿವಾಟಿನ ಆಳ ಅಧ್ಯಯನಕ್ಕಾಗಿ ಅಧಿಕಾರಿ ಗಳ ತಂಡ ಕಳುಹಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.

ವಂಚನೆ ಪ್ರಕರಣಗಳು ನಡೆದಿರುವ ಬ್ಯಾಂಕುಗಳೆಂದರೆ– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ– ದೆಹಲಿ ಶಾಖೆ 60 ಲಕ್ಷ ರೂ., ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ– ಮುಂಬೈ ಶಾಖೆ 20 ಲಕ್ಷ 30 ಸಾವಿರ ರೂ., ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ– ಅಂಕೋಲಾ ಶಾಖೆ 28 ಲಕ್ಷ 31 ಸಾವಿರ ರೂ. ಮತ್ತು ದೇನಾ ಬ್ಯಾಂಕ್– ಮಂಗಳೂರು ಶಾಖೆ 15 ಲಕ್ಷ ರೂ.

ADVERTISEMENT

ಆಳವಾದ ಸಮುದ್ರದಲ್ಲಿ ಮೀನು ಗುರುತಿಸುವ ಘಟಕ ಸದ್ಯದಲ್ಲೇ ಮಂಗಳೂರಿಗೆ

ಬೆಂಗಳೂರು, ಆ. 13– ಆಳವಾದ ಸಮುದ್ರದಲ್ಲಿ ಮೀನು ಇರುವ ಪ್ರದೇಶಗಳನ್ನು ಗುರುತಿಸುವ ಘಟಕ ಒಂದನ್ನು ಮಂಗಳೂರಿನಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲಿದೆ.

ಈ ವಿಷಯವನ್ನು ಇಂದು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ ರಾಜ್ಯ ಮತ್ಸ್ಯೋದ್ಯಮ ಅಭಿವೃದ್ಧಿ ಕಾರ್ಪೊರೇಷನ್ನಿನ ಅಧ್ಯಕ್ಷ ಶ್ರೀ ಎಚ್.ಸಿ. ಲಿಂಗಾರೆಡ್ಡಿಯವರು ಈ ಘಟಕವು ಈ ವರ್ಷದ ಕೊನೆಯ ವೇಳೆಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆಯೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.