ADVERTISEMENT

25 ವರ್ಷಗಳ ಹಿಂದೆ| ಸೋಮವಾರ 16-9-1996

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 19:30 IST
Last Updated 15 ಸೆಪ್ಟೆಂಬರ್ 2021, 19:30 IST
   

ಬದುಕಿನ ಭಾರದಲ್ಲಿ ಹಬ್ಬದ ಹರ್ಷವೆಲ್ಲಿ?‍– ಗೃಹಿಣಿ ಪ್ರಶ್ನೆ

ಬೆಂಗಳೂರು, ಸೆ. 15– ಹಬ್ಬದ ಕಾಲ ಬಂದಿದೆ. ಶ್ರೀಕೃಷ್ಣ ಜಯಂತಿ ಕಳೆಯಿತು. ಈಗ ಗೌರಿ– ಗಣೇಶನ ಹಬ್ಬ. ಮುಂದೆ ಬರಲಿದೆ ನವರಾತ್ರಿ– ನಾಡಹಬ್ಬ. ದೀಪಾವಳಿಯೂ ದೂರವಿಲ್ಲ. ಹಬ್ಬಕ್ಕೆ ಬೇಕು ವಿಶೇಷ ಅಡುಗೆ. ಮಾಂಸದೂಟ. ಹಬ್ಬ ಬಿಡಿ; ದಿನನಿತ್ಯದ ಬಳಕೆಗೂ ಪಲ್ಯ, ಕೋಸಂಬರಿ, ಅನ್ನ ಸಾರು ಬೇಡವೇ? ಪೂಜೆ ಪುನಸ್ಕಾರಕ್ಕೆ ಸಾಮಗ್ರಿ ಬೇಡವೇ? ಇದಕ್ಕೆಲ್ಲ ಪೇಟೆಯಲ್ಲಿ ಗಂಟು ಬಿಚ್ಚಬೇಕು. ಈ ಬಾರಿ ಕೆಳದ ಬಾರಿಗಿಂತ ದೊಡ್ಡ ಗಂಟೇ ಬೇಕು. ‘ಪ್ರಜಾವಾಣಿ’ ಸಾಮಾನ್ಯ ಜನರನ್ನು ವಿಚಾರಿಸಿದಾಗ ಅವರನ್ನುವ ಪ್ರಕಾರ, ದಿನಸಿ ಪದಾರ್ಥಗಳ ಬೆಲೆ ಕಳೆದ ವರ್ಷಕ್ಕಿಂತ ಶೇ 25ರಷ್ಟು ಏರಿದ್ದರೆ ತರಕಾರಿ, ಹಣ್ಣು– ಹಂಪಲುಗಳ ಬೆಲೆ ಶೇ 75ರಿಂದ 100ರಷ್ಟು ಏರಿದೆ.

ಆದರೆ, ಸರ್ಕಾರದ ಲೆಕ್ಕದ ಪ್ರಕಾರ ಸಗಟು ಬೆಲೆಗಳು ಏರುತ್ತಿರುವ ಪ್ರಮಾಣ ಅತ್ಯಲ್ಪ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.