ADVERTISEMENT

25 ವರ್ಷಗಳ ಹಿಂದೆ| ಭಾನುವಾರ 15.9.1996

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 19:30 IST
Last Updated 14 ಸೆಪ್ಟೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಜ್ಯಸಭೆಗೆ ಪ್ರಧಾನಿ ಸ್ಪರ್ಧೆ: ಸಚಿವ ಮಿಶ್ರಾ ಟೀಕೆ

ಬೆಂಗಳೂರು, ಸೆ. 14– ಜನಪ್ರಿಯ ಪ್ರಧಾನಿ ಯೊಬ್ಬರು ಜನತೆಯಿಂದ ನೇರವಾಗಿ ಲೋಕಸಭೆಗೆ ಆಯ್ಕೆ ಆಗಬೇಕೇ ಹೊರತೂ ವಿಧಾನಸಭೆಯಂಥ ಹಿಂದಿನ ಬಾಗಿಲಿಂದ ಸಂಸತ್ತಿಗೆ ಆಯ್ಕೆಯಾಗುವುದು ಸಲ್ಲ ಎಂದು ಎಚ್‌.ಡಿ.ದೇವೇಗೌಡರ ಸಂಪುಟದ ಕೃಷಿ ಸಚಿವ. ಸಿಪಿಐ ಮುಖಂಡ ಚತುರಾನನ ಮಿಶ್ರಾ ಇಂದು ಇಲ್ಲಿ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರು.

‘ಗೌಡರು ರಾಜ್ಯಸಭೆಗೆ ಆಯ್ಕೆ ಆಗಲು ನಡೆಸುತ್ತಿರುವ ಪ್ರಯತ್ನ ನನಗಂತೂ ಗೊತ್ತಿಲ್ಲ. ಅವರು ಈ ವಿಚಾರವನ್ನು ಸಂಯುಕ್ತ ರಂಗದ ಸದಸ್ಯ ಪಕ್ಷಗಳೊಂದಿಗೆ ಚರ್ಚಿಸಿದಂತಿಲ್ಲ; ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಜನಪ್ರಿಯ ಪ್ರಧಾನಿಯೊಬ್ಬರು ನೇರವಾಗಿ ಜನತೆಯಿಂದಲೇ ಆಯ್ಕೆಯಾಗಬೇಕು’ ಎಂದು ಸುದ್ದಿಗಾರರಿಗೆ ಹೇಳಿದರು.

ADVERTISEMENT

ಕಾಫಿ ಕಡ್ಡಾಯ ಸಂಗ್ರಹ ಪದ್ಧತಿ ಪೂರ್ಣ ರದ್ದು

ನವದೆಹಲಿ, ಸೆ. 14 (ಪಿಟಿಐ)– ಕಾಫಿ ಮಂಡಳಿಯು ದೊಡ್ಡ ಬೆಳೆಗಾರರಿಂದ ಕಡ್ಡಾಯವಾಗಿ ಮಾಡುತ್ತಿದ್ದ ಕಾಫಿ ಸಂಗ್ರಹಣೆ ಪದ್ಧತಿಯನ್ನು (ಪೂಲಿಂಗ್) ಸರ್ಕಾರ ರದ್ದುಪಡಿಸಿದೆ. ಇದರಿಂದ ಎಲ್ಳಾ ವರ್ಗಗಳ ಕಾಫಿ ಬೆಳೆಗಾರರು ತಾವು ಬೆಳೆದ ಎಲ್ಲಾ ಕಾಫಿ ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.