ADVERTISEMENT

50 ವರ್ಷಗಳ ಹಿಂದೆ| ಮಂಗಳವಾರ 14–9–1971

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 19:30 IST
Last Updated 13 ಸೆಪ್ಟೆಂಬರ್ 2021, 19:30 IST
   

ರಾಜ್ಯದಲ್ಲಿ ಹಿಂದಿ ಮಾಧ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಯತ್ನಕ್ಕೆ ಉಗ್ರ ವಿರೋಧ

ಬೆಳಗಾವಿ, ಸೆ.13– ಕರ್ನಾಟಕದಲ್ಲಿ ಹಿಂದಿ ಭಾಷಾ ಮಾಧ್ಯಮ ವಿಶ್ವವಿದ್ಯಾಲಯದ ಸ್ಥಾಪನೆ ಯತ್ನವನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಉಗ್ರವಾಗಿ ವಿರೋಧಿಸಿದೆ.

ಭಾನುವಾರ ರಾತ್ರಿ ಮುಕ್ತಾಯವಾದ ಎರಡು ದಿನಗಳ ಸಮ್ಮೇಳನವು, ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡಲು ಮತ್ತು ರಾಜ್ಯದಲ್ಲಿ ಆಡಳಿತದ ಎಲ್ಲ ಮಟ್ಟಗಳಲ್ಲೂ ಕನ್ನಡವನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಪಡಿಸಿದೆ.

ADVERTISEMENT

ತುಳಸೀದಾಸ್‌ದಾಸಪ್ಪ ಅವರ ಮತ ಚೀಟಿಗಳ ‘ಕೆಲವೊಂದು ವಿಚಿತ್ರ’

ಬೆಂಗಳೂರು, ಸೆ.13– ಮೈಸೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಗೊಂಡ ಆಡಳಿತ ಕಾಂಗ್ರೆಸ್ಸಿನ ಅಭ್ಯರ್ಥಿ ಎಚ್‌. ತುಳಸೀದಾಸ್‌
ದಾಸಪ್ಪ ಅವರ ಚೀಟಿಗಳ ಕೆಲವೊಂದು ವಿಚಿತ್ರಗಳು ಮತಗಳ ಎಣಿಕೆ ಸಮಯದಲ್ಲಿ ಕಂಡು ಬಂದವು ಎಂದು ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಡಾ.ಎಚ್‌.ಎಲ್‌. ತಿಮ್ಮೇಗೌಡರ ಪರವಾಗಿ ಏಜೆಂಟರಾಗಿ ಕಾರ್ಯ ನಿರ್ವಹಿಸಿದ ಇಬ್ಬರು ಇಂದು ಮೈಸೂರು ಹೈಕೋರ್ಟಿನಲ್ಲಿ ಸಾಕ್ಷ್ಯಗಳನ್ನಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.