ADVERTISEMENT

50 ವರ್ಷಗಳ ಹಿಂದೆ| ಶನಿವಾರ 18–9–1971

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 19:30 IST
Last Updated 17 ಸೆಪ್ಟೆಂಬರ್ 2021, 19:30 IST
   

ತೆರಿಗೆ ಕಳ್ಳತನ ತಪ್ಪಿಸಲು ಸದ್ಯವೇ ಬಿಗಿ ಶಾಸನ

ಮುಂಬೈ, ಸೆ. 17– ತೆರಿಗೆ ಕಳ್ಳತನವನ್ನು ‘ಇನ್ನೂ ಹೆಚ್ಚು ತೀವ್ರ ಅಪರಾಧವನ್ನಾಗಿ’ ಮಾಡಲು ತೆರಿಗೆಗೆ ಸಂಬಂಧಿಸಿದ ಶಾಸನಗಳನ್ನು ಮಾರ್ಪಡಿಸಲಾಗುವುದು ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವರಾದ ಕೆ.ಆರ್‌. ಗಣೇಶ್‌ರವರು ಇಲ್ಲಿ ಇಂದು ಹೇಳಿದರು.

ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಈಗ ರಾಷ್ಟ್ರದಲ್ಲಿ 500 ಕೋಟಿ ರೂಪಾಯಿ ತೆರಿಗೆ ಬಾಕಿ ಇದೆಯೆಂದು ಇದರಲ್ಲಿ ಮುಂಬೈನಿಂದಲೇ 200 ಕೋಟಿ ರೂ. ಬರಬೇಕಾಗಿದೆಯೆಂದೂ ನುಡಿದರು.

ADVERTISEMENT

ಕಲ್ಕತ್ತ ಹೈಕೋರ್ಟಿನಲ್ಲಿ ತೆರಿಗೆ ಬಾಕಿಗೆ ಸಂಬಂಧಿಸಿದಂತೆ 2000 ರಿಟ್‌ ಅರ್ಜಿಗಳು ಬಾಕಿ ಇರುವುದನ್ನು ಅವರು ಪ್ರಸ್ತಾಪಿಸಿ, ಇವುಗಳಲ್ಲಿ 75 ಅರ್ಜಿಗಳು ಒಬ್ಬರಿಂದಲೇ ದಾಖಲು ಮಾಡಲ್ಪಟ್ಟಿದೆ ಎಂದೂ ನ್ಯಾಯಾಲಯಗಳೂ ತಮ್ಮ ಧೋರಣೆಯನ್ನೂ ಬದಲಾಯಿಸಬೇಕೆಂದೂ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.