ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 24.8.1971

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 19:16 IST
Last Updated 23 ಆಗಸ್ಟ್ 2021, 19:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾವಣನ ಶವ ಸುರಕ್ಷಿತವಾಗಿದೆಯೆ?

ಕೊಲಂಬೊ, ಆ. 23– ಸಿಂಹಳದಲ್ಲಿನ ದುರ್ಗಮವಾದ ಪರ್ವತವೊಂದರ ಮೇಲೆ ಲಂಕೆಯ ದೊರೆ ರಾವಣನ ಮೃತದೇಹವನ್ನು ಸುವಾಸನಾ ದ್ರವ್ಯಗಳಿಂದ ಪರಿಷ್ಕರಿಸಿ ರಕ್ಷಿಸಿಡಲಾಗಿದೆ ಎಂಬ ಬೌದ್ಧ ಪುರೋಹಿತರೊಬ್ಬರ ಮಾತು ‘ಭಾರಿ ಕೀಟಲೆಯ ಮೋಸ’ ಎಂದು ಸಿಂಹಳದ ಪ್ರಮುಖ ವಿದ್ವಾಂಸರು ತಿಳಿಸಿದ್ದಾರೆ.

ಆದರೆ, ಈ ಪುರೋಹಿತರ ಮಾತಿನಲ್ಲಿ ವಿಶ್ವಾಸವಿಟ್ಟಿರುವ ಅನೇಕ ಮಂದಿ ಇದ್ದಾರೆ. ಅವರು ‘ಶ್ರೀ ರಾವಣನ ಮೃತದೇಹದ ಶೋಧನೆಗಾಗಿ ಸಮಿತಿ’ಯೊಂದನ್ನು ರಚಿಸಿದ್ದಾರೆ.

ADVERTISEMENT

ಭಾರತದ ಕಾಫಿಗೆ ಜಪಾನ್ ಆಸಕ್ತಿ

ನವದೆಹಲಿ, ಆ. 23– ಭಾರತದಿಂದ ಜಪಾನ್ ಹತ್ತು ಸಾವಿರ ಟನ್ ಕಾಫಿ ಖರೀದಿ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ಜಪಾನಿನ ಸಂಸ್ಥೆಯೊಂದು ವಿದೇಶ ವಾಣಿಜ್ಯ ಸಚಿವ ಶಾಖೆಗೆ ಪತ್ರ ಬರೆದು, ಕಾಫಿ ಕೊಳ್ಳಲು ಮುಂದೆ ಬಂದಿದೆ. ಜಪಾನಿಗೆ ಕಾಫಿಬೀಜದ ಮಾದರಿಗಳನ್ನು ಕಳುಹಿಸಿಕೊಡುವಂತೆ ವಿದೇಶ ವಾಣಿಜ್ಯ ಶಾಖೆ ಆದೇಶ ನೀಡಿದೆಯೆಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.