ADVERTISEMENT

ಗೋಡ್ಸೆ ಪ್ರತಿಮೆ ಸ್ಥಾಪನೆ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 19:31 IST
Last Updated 14 ಸೆಪ್ಟೆಂಬರ್ 2021, 19:31 IST

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯ ಪ್ರತಿಮೆ ಸ್ಥಾಪಿಸಲು ಹಿಂದೂ ಸೇನಾ ಸಂಘಟನೆ ತೆಗೆದುಕೊಂಡಿರುವ ನಿರ್ಧಾರ (ಪ್ರ.ವಾ., ಸೆ. 13) ಹಿಂಸೆಯನ್ನು ಪ್ರಚೋದಿಸುವ ಕೃತ್ಯ. ವಿಶ್ವವನ್ನೇ ಬೆರಗುಗೊಳಿಸಿದ ಭಾರತೀಯ ಅಹಿಂಸಾ ಸಿದ್ಧಾಂತಕ್ಕೆ ತಿಲಾಂಜಲಿಯನ್ನಿಕ್ಕುವ ಘೋರ ಪ್ರಮಾದಕ್ಕೆ ಇದು ಆಸ್ಪದವನ್ನು ನೀಡುತ್ತದೆ.

ಗೋಡ್ಸೆ ವಿಚಾರಗಳು ದೇಶಹಿತದ ಪರವಾಗಿ ಇದ್ದವೋ ಇಲ್ಲವೋ ಆದರೆ ಆತನು ತುಳಿದ ಹಿಂಸಾಮಾರ್ಗ ಮಾತ್ರ ಎಂದೆಂದಿಗೂ ಕ್ಷಮಿಸುವಂಥದ್ದಲ್ಲ. ಇಂದಿನ ಯುವಕರಲ್ಲಿ ರಾಷ್ಟ್ರಪ್ರೇಮವನ್ನು ತುಂಬುವುದು ಪ್ರತಿಮೆ ಸ್ಥಾಪಿಸುವ ಉದ್ದೇಶ ಎಂದು ಸಂಘಟಕರು ಹೇಳಿದ್ದಾರೆ. ಗೋಡ್ಸೆ ಅಂತಹವರ ವಿಚಾರಗಳಿಂದ ರಾಷ್ಟ್ರಭಕ್ತಿಯನ್ನು
ಕಲಿಯುವುದು ಸರ್ವತಾ ಸಾಧ್ಯವಿಲ್ಲ. ಹಾಗೆ ಮಾಡುತ್ತೇವೆ ಎಂದುಕೊಂಡರೆ ಅದೊಂದು ಹಾಸ್ಯಾಸ್ಪದ ವಿಚಾರ. ಗಾಂಧಿ ಹಂತಕನ ಪ್ರತಿಮೆ ಸ್ಥಾಪನೆ ಪ್ರಯತ್ನ ನಿಲ್ಲಬೇಕು.

– ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ,ಸಿಂಧನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.