ADVERTISEMENT

ಓದುವ ಸಂಸ್ಕೃತಿ ಬೆಳೆಯಲಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 19:30 IST
Last Updated 7 ಸೆಪ್ಟೆಂಬರ್ 2021, 19:30 IST

ಡಾ. ಹಾ.ಮಾ.ನಾಯಕರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಯೋಜನೆಯೊಂದನ್ನು ರೂಪಿಸಿದ್ದರು. ಅದರಂತೆ, ವೃತ್ತಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ವರ್ಷಪೂರ್ತಿ ಪ್ರಕಟವಾಗುತ್ತಿದ್ದ ಕಾವ್ಯ, ಸಣ್ಣಕಥೆ, ವಿಮರ್ಶೆ, ಪ್ರಬಂಧ, ವಿನೋದ, ವಿಜ್ಞಾನ, ಮಕ್ಕಳ ಸಾಹಿತ್ಯದಂತಹ ಬರಹಗಳನ್ನು ಒಟ್ಟುಗೂಡಿಸಲು, ಬರಹಗಾರ ರೊಬ್ಬರಿಗೆ ಸಂಪಾದನೆಯ ಕೆಲಸ ವಹಿಸಿ ಅದನ್ನು ಅಕಾಡೆಮಿಯ ಪ್ರಕಾಶತ್ವದ ಅಡಿಯಲ್ಲಿ ಪ್ರಕಟಿಸುತ್ತಿದ್ದರು.

ಈ ಯೋಜನೆ ಕೆಲವು ವರ್ಷಗಳವರೆಗೆ ಜಾರಿಯಲ್ಲಿತ್ತು. ನಂತರದ ದಿನಗಳಲ್ಲಿ ಕಾಣೆಯಾಯಿತು. ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರು ಈ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಬಹುದೇ? ಅಕ್ಷರಗಳು ಯಾವುದೋ ಒಂದು ಮೂಲೆ ಸೇರುವ ಬದಲು ಕೃತಿಯ ರೂಪ ಪಡೆಯಲಿ‌, ಬರಹ ಉಳಿಯಲಿ, ಓದುವ ಸಂಸ್ಕೃತಿ ಬೆಳೆಯಲಿ.

- ಮಹಾಂತೇಶ ಹೊದ್ಲೂರ, ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.