ADVERTISEMENT

ವಾಚಕರ ವಾಣಿ: ಬೆಟ್ಟಗುಡ್ಡಗಳನ್ನೇ ಬಿಡದವರು...

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 20:30 IST
Last Updated 22 ಆಗಸ್ಟ್ 2021, 20:30 IST

ನಕಲಿ ವ್ಯಾಜ್ಯ ಹೂಡಿ ಭೂಕಬಳಿಕೆ ಮಾಡುತ್ತಿರುವವರ ಕುರಿತ ವರದಿ (ಪ್ರ.ವಾ., ಆ. 22) ಪ್ರಕಟವಾಗಿದೆ. ಭೂಕಬಳಿಕೆ ಬಹಳ ಹಿಂದಿನಿಂದಲೂ ನಡೆಯುತ್ತಿದ್ದು, ಸರ್ಕಾರ ಈಗಲಾದರೂ ಅದನ್ನು ಸರಿಯಾಗಿ ಪರಾಂಬರಿಸಬೇಕು. ಬೆಟ್ಟಗುಡ್ಡಗಳನ್ನೇ ಬಿಡದ ದಲ್ಲಾಳಿಗಳು ಇನ್ನು ಬೆಂಗಳೂರಿನಂತಹ ನಗರದಲ್ಲಿ ಖಾಲಿ ಜಾಗವನ್ನು ಸುಮ್ಮನೆ ಬಿಟ್ಟಾರೆಯೇ? ಇದಕ್ಕೆ ಮುಖ್ಯವಾಗಿ ಸಬ್ ರಿಜಿಸ್ಟ್ರಾರ್ ಹಾಗೂ ಅಧಿಕಾರಿಗಳೇ ಕಾರಣ. ಅವರ ಗಮನಕ್ಕೆ ಬಾರದೆ ಆ ಸ್ಥಳಗಳು ಬಿಕರಿಯಾಗುವುದು ಅಸಾಧ್ಯ. ಮೊದಲು ಅಂತಹ ಕೆಟ್ಟ ಹುಳುಗಳನ್ನು ಇಲಾಖೆಯಿಂದ ತೆಗೆದರೆ ಎಲ್ಲವೂ ಸುಲಲಿತವಾಗುತ್ತವೆ.

-ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT