ADVERTISEMENT

ವಾಚಕರ ವಾಣಿ: ಶೀಘ್ರ ದೊರಕಲಿ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 19:30 IST
Last Updated 24 ಆಗಸ್ಟ್ 2021, 19:30 IST

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2013-14ನೇ ಸಾಲಿನಿಂದ 2016-17ರವರೆಗೆ ಮಾನ್ಯತೆ ಕಳೆದುಕೊಂಡ ಸಮಯದಲ್ಲಿ, ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಿ ವಿವಿಧ ಸ್ನಾತಕ, ಸ್ನಾತಕೋತ್ತರ ಪದವಿಗಳನ್ನು ನೀಡಿರುವುದು ಸರಿಯಷ್ಟೆ. ಪದವಿ ಗಳಿಸಿರುವ ಈ ಸಾಲಿನ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದೆಂದು ಹೈಕೋರ್ಟ್, ಪದವಿಗಳನ್ನು ಮಾನ್ಯ ಮಾಡಿ ತೀರ್ಪು ನೀಡಿದ ಬಳಿಕ ಈ ಬಗ್ಗೆ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿತು.

ಆದರೆ, ವಿಶ್ವವಿದ್ಯಾಲಯವು ಪದವಿ ಪ್ರಮಾಣಪತ್ರವನ್ನೇ ವಿತರಿಸಿಲ್ಲ. ವಿಶ್ವವಿದ್ಯಾಲಯವು 2016ರಲ್ಲಿ ಪದವಿ ಪ್ರಮಾಣಪತ್ರಗಳಿಗೆ ಶುಲ್ಕ ಕಟ್ಟಿಸಿಕೊಂಡು ಐದು ವರ್ಷಗಳೇ ಕಳೆದಿವೆ. ಕಳೆದ ಬಾರಿ ಮುಕ್ತ ವಿಶ್ವವಿದ್ಯಾಲಯವು ಘಟಿಕೋತ್ಸವ ನಡೆಸಿದರೂ 2013-14, 2014-15ನೇ ಸಾಲಿನಲ್ಲಿ ಪದವಿ ಪಡೆದವರಿಗೆ ಪ್ರಮಾಣ ಪತ್ರವನ್ನೇ ನೀಡಿಲ್ಲ. ಎರಡು ವರ್ಷದಿಂದ ಯುಜಿಸಿಯಿಂದ ಮಾನ್ಯತೆ ಪಡೆದು ಕಾರ್ಯಾಚರಿಸುತ್ತಿರುವ ವಿಶ್ವವಿದ್ಯಾಲಯ ತನ್ನ ಹಳೆಯ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಉನ್ನತ ಶಿಕ್ಷಣ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು.

ವೆಂಕಟೇಶ ಪಿ.,ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.