ADVERTISEMENT

ವಾಚಕರ ವಾಣಿ: ಆಗ ಎದುರಾಗದ ನೈತಿಕ ಪ್ರಶ್ನೆ...

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 22:00 IST
Last Updated 26 ಆಗಸ್ಟ್ 2021, 22:00 IST

ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ‘ಇಂದಿರಾ’ ತೆಗೆದು ‘ಅನ್ನಪೂರ್ಣೇಶ್ವರಿ’ ಹೆಸರಿಡಬೇಕು ಎಂದು ಬಿಜೆಪಿಯ ಕೆಲವು ನಾಯಕರು ಒತ್ತಾಯಿಸುತ್ತಿರುವ ಸಂಬಂಧ ಅನಗತ್ಯ ವಿವಾದ ಸೃಷ್ಟಿಯಾಗಿದೆ. ಈ ವಿವಾದದ ಚರ್ಚೆಯಲ್ಲಿ ಕೆಲವರು ‘ಹೆಸರಲ್ಲೇನಿದೆ’ ಎನ್ನುತ್ತಾರೆ. ನಿಜ, ‘ಇಂದಿರಾ’, ‘ಅನ್ನಪೂರ್ಣೇಶ್ವರಿ’ ಯಾವುದೇ ಹೆಸರಿಟ್ಟರೂ ಸದುದ್ದೇಶದ ಅನ್ನ ನೀಡುವಿಕೆ ಮುಖ್ಯ! ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದ್ದ ‘ರಾಷ್ಟ್ರಕವಿ’ ಪುರಸ್ಕಾರವನ್ನು ರಾಜಪ್ರಭುತ್ವದ ಕುರುಹು ಎಂಬ ಕುಂಟುನೆಪವೊಡ್ಡಿ ಯೋಜನೆಯನ್ನೇ ಧಿಕ್ಕರಿಸಿತಲ್ಲವೇ? ಆಗ ಕಾಂಗ್ರೆಸ್‍ಗೆ ಎದುರಾಗದ ನೈತಿಕ ಪ್ರಶ್ನೆ ಈಗೇಕೆ ಕಾಡುತ್ತಿದೆ? ತಾವು ಅಧಿಕಾರದಲ್ಲಿದ್ದಾಗ ಕುಬ್ಜವಾಗಿ ಯೋಚಿಸಿ ಮತ್ತೊಬ್ಬರಿಂದ ವಿಶಾಲ ಮನಃಸ್ಥಿತಿಯನ್ನು ಅಪೇಕ್ಷಿಸುವುದು ಇಬ್ಬಗೆ ನೀತಿಯ ಪ್ರತ್ಯಕ್ಷ ದರ್ಶನ ಮಾಡಿಕೊಟ್ಟಂತೆ ತಾನೆ?

ಆರ್.ವೆಂಕಟರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT