ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ಅವಸರ ಸಲ್ಲ!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 19:30 IST
Last Updated 16 ಸೆಪ್ಟೆಂಬರ್ 2021, 19:30 IST

ಕರ್ನಾಟಕ ಸರ್ಕಾರವು 2021-22ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‍ಇಪಿ) ಜಾರಿಗೊಳಿಸುತ್ತಿದೆ. ನಮ್ಮ ರಾಜ್ಯ ಇಂದು ಶೈಕ್ಷಣಿಕ ದೌರ್ಬಲ್ಯವನ್ನು ಎದುರಿಸುತ್ತಿದೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ– 2015ರ ಪ್ರಕಾರ, ರಾಜ್ಯದಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ 0.611. ಇದರಲ್ಲಿ ವರಮಾನದ ಕೊಡುಗೆ ಶೇ 33.10ರಷ್ಟಿದ್ದರೆ (0.615) ಆರೋಗ್ಯ ಸೂಚಿಯ ಪಾಲು ಶೇ 40.15ರಷ್ಟಿದೆ (0.746). ಆದರೆ ಶಿಕ್ಷಣದ ಪಾಲು ಕೇವಲ ಶೇ 26.75ರಷ್ಟಿದೆ (0.497). ಇದು 1991ರಲ್ಲಿ ಶೇ 37.12ರಷ್ಟಿತ್ತು ಮತ್ತು 2001ರಲ್ಲಿ ಶೇ 36.49ರಷ್ಟಿತ್ತು. ಕಳೆದ 20 ವರ್ಷಗಳಲ್ಲಿ ಮಾನವ ಅಭಿವೃದ್ಧಿಯಲ್ಲಿ ಶಿಕ್ಷಣದ ಕೊಡುಗೆಯು ಕುಸಿಯುತ್ತಾ ನಡೆದಿದೆ (ಮೂಲ: ಕರ್ನಾಟಕ ಮಾನವ ಅಭಿವೃದ್ಧಿ ವರದಿ– 2015).

ನಮ್ಮ ರಾಜ್ಯದಲ್ಲಿನ ಶಿಕ್ಷಣ ವಲಯವು ಎನ್‍ಇಪಿ ಎಂಬ ಹೊಸ ಪ್ರಯೋಗಕ್ಕೆ ಸಿದ್ಧವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮೇಲಾಗಿ ಕೋವಿಡ್‌ನಿಂದಾಗಿ ನಮ್ಮ ಮಕ್ಕಳು, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮಕ್ಕಳು, ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು, ಆನ್‍ಲೈನ್ ಪಾಠ ಪಡೆದು ಕೊಳ್ಳುವುದು ಸಾಧ್ಯವಾಗದೆ, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಬೇಕು. ಇದರ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ನಾಡಿನ ಎಲ್ಲ ಹಕ್ಕುದಾರರ ಜೊತೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸರ್ಕಾರವಿಸ್ತೃತ ಸಮಾಲೋಚನೆ ನಡೆಸಿಲ್ಲ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದನ್ನು
ನಿಲ್ಲಿಸಬೇಕು ಮತ್ತು ಇದರ ಇತಿಮಿತಿಗಳ ಬಗ್ಗೆ ಮತ್ತು ಇದರಲ್ಲಿನ ತಾರತಮ್ಯವಾದಿ ಸಂಗತಿಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಬೇಕು.

– ಟಿ.ಆರ್.ಚಂದ್ರಶೇಖರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.