ADVERTISEMENT

ವಾಚಕರ ವಾಣಿ | ಕನ್ನಡದ ಮಹತ್ವ: ಕಾರ್ಯಾಗಾರದ ಜರೂರಿದೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಆಗಸ್ಟ್ 2021, 20:30 IST
Last Updated 20 ಆಗಸ್ಟ್ 2021, 20:30 IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮವೊಂದರಲ್ಲಿ
ಮಾತನಾಡುತ್ತಾ, ಅನ್ಯಭಾಷೆಯವರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕಾಗಿದೆ ಎಂದಿದ್ದಾರೆ. ಇದು ತುರ್ತಾಗಿ ಆಗಬೇಕಾಗಿದೆ. ಇದೇ ರೀತಿ, ಕನ್ನಡ ಚಳವಳಿಯಲ್ಲಿ ತೊಡಗಿಕೊಂಡ ಮುಖ್ಯಸ್ಥರು, ಯುವ ಕನ್ನಡಪರ ಹೋರಾಟಗಾರರಿಗೆ ಕನ್ನಡ ಚಳವಳಿಯ ಹಿನ್ನೆಲೆ, ಇಂದು ಅದರ ಸ್ವರೂಪ ಹೇಗಿರಬೇಕು? ಕರ್ನಾಟಕದ ವಿವಿಧ ಪ್ರದೇಶಗಳ ವೈವಿಧ್ಯ, ಉದ್ಭವಿಸಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸವಾಲುಗಳು, ಏಕೀಕರಣ ಉದ್ದೇಶದ ವ್ಯಾಪ್ತಿ ಮತ್ತು ಅನುಷ್ಠಾನ, ಸಾಹಿತ್ಯ, ಚಲನಚಿತ್ರ, ರಂಗಭೂಮಿ ಕುರಿತ ಸಮಗ್ರ ತಿಳಿವಳಿಕೆಯ ಕಾರ್ಯಾಗಾರ
ಏರ್ಪಡಿಸಬೇಕಾದ ಜರೂರು ಇದೆ.

- ಆರ್.ವೆಂಕಟರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT