ADVERTISEMENT

ವಾಚಕರ ವಾಣಿ | ಚಿತ್ರಮಂದಿರಗಳಿಗೆ ಬೇಕು ಪುನಶ್ಚೇತನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಆಗಸ್ಟ್ 2021, 20:15 IST
Last Updated 20 ಆಗಸ್ಟ್ 2021, 20:15 IST

ಹಲವು ತಿಂಗಳುಗಳು ಬಂದ್ ಮಾಡಲಾಗಿದ್ದ ಚಿತ್ರಮಂದಿರಗಳು, ಸರ್ಕಾರದ ಆದೇಶದಂತೆ ಶೇ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸಜ್ಜಾಗಿ ಪ್ರದರ್ಶನ ಪುನರಾರಂಭಿಸಿವೆ. ಆದರೆ ತಾರಾ ವರ್ಚಸ್ಸು ಇರುವ ನಟರ ಚಿತ್ರಗಳ ಬಿಡುಗಡೆಯಿಲ್ಲದೇ ಪ್ರೇಕ್ಷಕರು ಹತ್ತಿರ ಸುಳಿಯುತ್ತಿಲ್ಲ. ಮಾಸ್ಕ್, ಪರಸ್ಪರ ಅಂತರ, ಸ್ಯಾನಿಟೈಸೇಷನ್‌ನಂತಹ ಎಲ್ಲಾ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೂ ಇಂತಹ ಸ್ಥಿತಿ ಇದೆ.

ವಿಪರ್ಯಾಸವೆಂದರೆ, ರಾಜಕೀಯ ಮೆರವಣಿಗೆಗಳು ಸೇರಿದಂತೆ ಹಲವೆಡೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಜನ ದಟ್ಟೈಸುತ್ತಿದ್ದರೂ ಮಗುಮ್ಮಾಗಿರುವ ಸರ್ಕಾರ, ಕೇವಲ ಮಾಲ್ ಹಾಗೂ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಪಾಲ್ಗೊಳ್ಳುವಿಕೆಗಷ್ಟೇ ಅವಕಾಶ ನೀಡಿದೆ. ಚಿತ್ರ ತಯಾರಕರು, ಚಿತ್ರಮಂದಿರ ಸಿಬ್ಬಂದಿ, ಕಾರ್ಮಿಕರಂತಹ ಸಹಸ್ರಾರು ಜನರ ಹಿತದೃಷ್ಟಿಯಿಂದ ತಕ್ಷಣ ಚಿತ್ರಮಂದಿರಗಳಿಗೆ ಪೂರ್ಣ ಪ್ರಮಾಣದ ಪ್ರೇಕ್ಷಕರೊಂದಿಗೆ ಚಿತ್ರ ಪ್ರದರ್ಶನ ಆರಂಭಿಸಲು ಮುಖ್ಯಮಂತ್ರಿ ಆದೇಶ ನೀಡಬೇಕು.

ಕೆ.ಶ್ರೀನಿವಾಸ ರಾವ್,ಹರಪನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.