ADVERTISEMENT

ವಾಚಕರ ವಾಣಿ | ಆಧುನಿಕ ಕನ್ಯಾಮಣಿಗಳು ಅರಿಯಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಆಗಸ್ಟ್ 2021, 20:30 IST
Last Updated 20 ಆಗಸ್ಟ್ 2021, 20:30 IST

ರೈತನನ್ನು ವರಿಸಲು ಹುಡುಗಿಯರೇ ಒಪ್ಪುತ್ತಿಲ್ಲ ಎಂದು ಚಾವಲ್ಮನೆ ಸುರೇಶ್ ನಾಯಕ್ (ವಾ.ವಾ., ಆ. 17) ಹೇಳಿದ್ದಾರೆ. ಒಮ್ಮೆ ನನ್ನ ಪರಿಚಿತರೊಬ್ಬರು ‘ಮೇಡಂ ನನ್ನ ಮಗ ಪೌರೋಹಿತ್ಯ ಮಾಡಿಕೊಂಡಿದ್ದಾನೆ. ಅವನಿಗೆ ಕನ್ಯೆ ಇದ್ದರೆ ಹೇಳಿ’ ಎಂದಿದ್ದರು. ಇದಾಗಿ ನಾಲ್ಕು ವರ್ಷಗಳೇ ಕಳೆದಿದ್ದವು. ಆ ವ್ಯಕ್ತಿ ಅಚಾನಕ್ಕಾಗಿ ನನಗೆ ಸಿಕ್ಕಾಗ ಅವರ ಮಗನ ಬಗ್ಗೆ ಕೇಳಿದೆ. ಆಗ ಅವರು ಇನ್ನೂ ತಮ್ಮ ಮಗನಿಗೆ ಕಂಕಣಭಾಗ್ಯ ಕೂಡಿ ಬಂದಿಲ್ಲ, ಪೌರೋಹಿತ್ಯ ಕಾಯಕದ ವರನನ್ನು ಕನ್ಯಾಮಣಿಗಳು ನಿರಾಕರಿಸುತ್ತಿದ್ದಾರೆ ಎಂದು ಬೇಸರದಿಂದ ಹೇಳಿದರು. ಪೂರ್ಣ ಪ್ರಮಾಣದ ಹಾಗೂ ಒಳ್ಳೆಯ ವರಮಾನ ತರುವ ಕಾಯಕವೆಂದರೆ ಅದು ಪೌರೋಹಿತ್ಯ ಎನ್ನುವುದು ಪಾಪ ಆಧುನಿಕ ಕನ್ಯಾಮಣಿಗಳಿಗೆ ಏನು ಗೊತ್ತು?

- ಟಿ.ಎಸ್.ಪ್ರತಿಭಾ,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT