ADVERTISEMENT

ವಾಚಕರ ವಾಣಿ | ಕಣ್ಣು, ಕರುಳಿಲ್ಲದ ಗಾಂಧಾರಿ ಸಂತಾನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಆಗಸ್ಟ್ 2021, 20:30 IST
Last Updated 20 ಆಗಸ್ಟ್ 2021, 20:30 IST

ಕಾಣುವ ಕಣ್ಣಿದ್ದರೂ ಕುರುಡ ಗಂಡನನ್ನು ನೋಡಲಿಚ್ಛೆಯಿಲ್ಲದೆಯೋ ಪತಿನಿಷ್ಠೆಯ ತೋರಿಕೆಗೋ ತಾನೇ ಬಯಸಿ ಬಟ್ಟೆ ಕಟ್ಟಿಕೊಂಡು ಕಣ್ಣಿನ ದೃಷ್ಟಿ ನಿವಾರಿಸಿಕೊಂಡ ಗಾಂಧಾರಿ (ಕಂದಹಾರ್- ಗಾಂಧಾರ- ಅಫ್ಗಾನಿಸ್ತಾನ) ದೇಶದ ಗಾಂಧಾರಿ ಸಂತಾನದವರಾದ ಈ ದುಷ್ಟ ತಾಲಿಬಾನೀಯರು ಕಣ್ಣು ಮಾತ್ರವಲ್ಲ ಕರುಳಿಲ್ಲದವರೂ ಆಗಿದ್ದಾರೆ. ಗಾಂಧಾರಿಯು ಪಾಂಡವರ ವಿಷಯಕ್ಕೆ ಮಮತೆಯುಳ್ಳವಳಲ್ಲವಾದರೂ ತನ್ನವರ ಮತ್ತು ತನ್ನ ಮಕ್ಕಳ ವಿಷಯಕ್ಕೆ ಅತೀವ ವಾತ್ಸಲ್ಯ, ವ್ಯಾಮೋಹವುಳ್ಳವಳಾಗಿದ್ದಳು. ಆದರೆ ಈ ಆಫ್ಗನ್ ನರರಾಕ್ಷಸರು ತಮ್ಮವರ ವಿಷಯಕ್ಕೇ ಕ್ರೂರಿಗಳಾಗಿ ಮಾನವಕರುಣೆ, ಪ್ರೀತಿ, ಒಳ್ಳೆಯತನದ ಲವಲೇಶವೂ ಇಲ್ಲದೆ, ಕ್ರೌರ್ಯ, ದೌರ್ಜನ್ಯ,ಅತ್ಯಾಚಾರಗಳನ್ನು ಗುತ್ತಿಗೆ ತೆಗೆದುಕೊಂಡ ಅಮಾನವೀಯ ಕುರುಡು ಕಟ್ಟಲೆಗಳ ವಾರಸುದಾರರಾಗಿ ಇಡೀ ಮಾನವ ಕುಲಕ್ಕೇ ಕಳಂಕಪ್ರಾಯರೂ ಕಂಟಕಪ್ರಾಯರೂ ಆಗಿದ್ದಾರೆ.

ಈ ಮನುಕುಲದ ಉಗ್ರರನ್ನು ಮಟ್ಟಹಾಕಲು ವಿಶ್ವ ಕ್ಷೇಮಾಕಾಂಕ್ಷಿಗಳೆಲ್ಲರೂ ಒಂದಾಗಲೇಬೇಕಿದೆ.

- ಆರ್.ಲಕ್ಷ್ಮೀನಾರಾಯಣ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.