ADVERTISEMENT

ಶಾಲೆ–ಕಾಲೇಜುಗಳಿಂದ ಆದೇಶದ ಉಲ್ಲಂಘನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಮೇ 2020, 15:39 IST
Last Updated 25 ಮೇ 2020, 15:39 IST

ಕೊರೊನಾ ಲಾಕ್‌ಡೌನ್‌ನ ಈ ಸಂಕಷ್ಟದ ದಿನಗಳಲ್ಲಿ, ಅನುದಾನರಹಿತ ಶಾಲಾಕಾಲೇಜುಗಳು ಎಂದಿನಂತೆ ಮನಸೋಇಚ್ಛೆ ಶುಲ್ಕ ವಸೂಲಿಗೆ ಮುಂದಾಗುತ್ತಿವೆ. ಶುಲ್ಕವನ್ನು ತಕ್ಷಣ ಕಟ್ಟುವಂತೆ ಎಸ್ಎಂಎಸ್, ಇ– ಮೇಲ್, ಫೋನ್‌ ಮೂಲಕ ಪೋಷಕರಿಗೆ ಸೂಚನೆ ಕೊಡುತ್ತಿವೆ. ಆನ್‌ಲೈನ್ ರೂಪದಲ್ಲಿ ಹಣ ಸಂದಾಯ ಮಾಡುವಂತೆ ಆಗ್ರಹಿಸುತ್ತಿವೆ.

ಪ್ರಸಕ್ತ ವರ್ಷ ಶುಲ್ಕ ಹೆಚ್ಚಿಸಬಾರದು ಎಂದು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದರೂ ಆಡಳಿತ ಮಂಡಳಿಗಳು ಈ ಆದೇಶವನ್ನು ಧಿಕ್ಕರಿಸುತ್ತಿವೆ. ಜೊತೆಗೆ, ಹತ್ತಾರು ವರ್ಷಗಳಿಂದ ಈ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಸಿಬ್ಬಂದಿಗೆ ಲಾಕ್‌ಡೌನ್ ನೆಪದಲ್ಲಿ ಸಂಬಳವನ್ನು ಮೊಟಕು ಮಾಡಿವೆ. ಸರ್ಕಾರವು ಮಹತ್ವದ ನಿರ್ಣಯ ಕೈಗೊಳ್ಳುವ ಮೂಲಕ ಪೋಷಕರು ಹಾಗೂ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು.

ವೈ.ಬಿ.ಎಚ್.ಜಯದೇವ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.