ADVERTISEMENT

ಎಲ್ಲೆಡೆ ತಮಿಳು ಸ್ತೋತ್ರ: ಎಷ್ಟು ಸರಿ?

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 18:16 IST
Last Updated 14 ಸೆಪ್ಟೆಂಬರ್ 2021, 18:16 IST

ತಮಿಳು ಭಾಷೆಯು ದೇವರ ಭಾಷೆಯಾಗಿದ್ದು ದೇಶದಾದ್ಯಂತ ದೇವಸ್ಥಾನಗಳ ಪ್ರತಿಷ್ಠಾಪನೆಯನ್ನು ಸಂತರು ರಚಿಸಿದ ತಮಿಳು ಸ್ತೋತ್ರಗಳೊಂದಿಗೆ ನೆರವೇರಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 14).

ತಮಿಳುನಾಡಿನಲ್ಲಿ ಬೇಕಾದರೆ ಎಲ್ಲ ದೇವಸ್ಥಾನಗಳಲ್ಲೂ ತಮಿಳು ಸ್ತೋತ್ರ ಪಠಣವಾಗಲಿ. ಆದರೆ ದೇಶದ ಬೇರೆ ದೇವಸ್ಥಾನಗಳಲ್ಲೂ ಈ ಭಾಷೆಯ ಸ್ತೋತ್ರವೇ ಪಠಣವಾಗಬೇಕು ಎನ್ನುವುದು ಎಷ್ಟರಮಟ್ಟಿಗೆ ಸರಿ? ಬೇರೆ ಬೇರೆ ರಾಜ್ಯದವರು ಇದನ್ನು ಅಂಗೀಕರಿಸುವುದಕ್ಕೆ ಒಪ್ಪಿಕೊಳ್ಳುತ್ತಾರೆಯೇ? ಇದರಿಂದ ಮತ್ತೊಮ್ಮೆ ಭಾಷಾ ವಿವಾದ ಭುಗಿಲೇಳುವುದಕ್ಕೆ ಆಸ್ಪದ ಕೊಟ್ಟಂತೆ ಆಗುವುದಿಲ್ಲವೇ?

- ಎಚ್.ವಿ.ಶ್ರೀಧರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.