ADVERTISEMENT

ಇದು ಪ್ರಜಾಪ್ರಭುತ್ವದ ಸೌಂದರ್ಯ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 19:31 IST
Last Updated 13 ಸೆಪ್ಟೆಂಬರ್ 2021, 19:31 IST

ಸಾಗರದಲ್ಲಿ ಇತ್ತೀಚೆಗೆ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಸನ್ಮಾನಿತರಾಗಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಪೊಲೀಸರಿಂದ ಬೆನ್ನುಮೂಳೆ ಮುರಿಯುವ ರೀತಿಯಲ್ಲಿ ಹೊಡೆತ ತಿಂದಿದ್ದೆ. ಈಗ ಪೊಲೀಸರ ಕೈನಿಂದ ಸೆಲ್ಯೂಟ್ ಸ್ವೀಕರಿಸುತ್ತಿದ್ದೇನೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ’ ಎಂದು ಮಾರ್ಮಿಕವಾಗಿ ಹೇಳಿದರು.

ನಿಜ, ಪ್ರಜಾಪ್ರಭುತ್ವದಲ್ಲಿ ಎಂತೆಂಥ ಅವಕಾಶಗಳು ನಾಗರಿಕರಿಗೆ ದೊರೆಯುತ್ತವೆ. ಅದರಲ್ಲೂ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾದರೆ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿ ಸ್ಥಾನದವರೆಗೆ ಏರಲು ಸಾಧ್ಯವಿದೆ. ಅಡ್ಡದಾರಿ ಹಿಡಿಯದೆ ಸಂಯಮದಿಂದ ಸೇವೆ ಮಾಡಿದರೆ ಉನ್ನತ ಸ್ಥಾನ ಒಲಿಯುವ ಸಾಧ್ಯತೆ ಇದೆ. ಹಾದಿ ತಪ್ಪಿದರೆಜೈಲು ಪಾಲಾಗುವ ಸಂದರ್ಭವೂ ಎದುರಾಗಬಹುದು. ಪ್ರಜೆಗಳೇ ಪ್ರಭುಗಳಾಗುವ ಆಶಯದ ಪ್ರಜಾಪ್ರಭುತ್ವದ ಅಂತರಂಗ ನಿಜಕ್ಕೂ ಸೌಂದರ್ಯವರ್ಧಿನಿಯಾಗಿದೆ.

ಗಣಪತಿ ಶಿರಳಗಿ, ಸಾಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.